ಮಹಿಳೆಯು ತನ್ನ ಗಂಡನ ವಿರುದ್ಧ ದೂರು ನೀಡುವ ಮೂಲಕ ವೃತ್ತಿ ಮತ್ತು ಖ್ಯಾತಿಯನ್ನು ನಾಶಮಾಡಲು ಮುಂದಾಗಿದ್ದರೆ ಅದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹಾಗೆಯೇ ಪುರುಷನು ವಿಚ್ಛೇದನ ಪಡೆಯಲು ಅರ್ಹನಾಗುತ್ತಾನೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.
ಮಧ್ಯರಾತ್ರಿ ರೈಲಿನಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿದ್ದ ಮಗು…! ಒಂದೇ ಒಂದು ಮನವಿಗೆ ಸ್ಪಂದಿಸಿ ನೆರವಿಗೆ ಸಾಲುಗಟ್ಟಿ ನಿಂತ ಜನ
ಪ್ರಕರಣವೊಂದರಲ್ಲಿ 2002ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ತನ್ನ ಪತ್ನಿಗೆ ವಿಚ್ಛೇದನ ನೀಡುವಂತೆ ಭಾರತೀಯ ವಾಯುಪಡೆ ಸಿಬ್ಬಂದಿ ಸಲ್ಲಿಸಿದ ಕೋರಿಕೆಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ನ್ಯಾಯಮೂರ್ತಿ ರಿತು ಬಹ್ರಿ ಮತ್ತು ನ್ಯಾಯಮೂರ್ತಿ ಅಶೋಕ್ ಕುಮಾರ್ ವರ್ಮಾ ಅವರನ್ನೊಳಗೊಂಡ ಪೀಠವು ಈ ಪ್ರಕರಣದಲ್ಲಿ ಮಾನಸಿಕ ಕ್ರೌರ್ಯದ ಕುರಿತು ಪ್ರಸ್ತಾಪಿಸಿದೆ.
ಪತಿ ಮತ್ತು ಅತ್ತೆ, ಮಾವಂದಿರ ವಿರುದ್ಧ ಆಧಾರರಹಿತ, ಅಸಭ್ಯ ಮತ್ತು ಮಾನಹಾನಿಕರ ಆರೋಪ ಮಾಡುವ ಪತ್ನಿಯ ನಡವಳಿಕೆಯು ಮೇಲ್ಮನವಿದಾರ, ಅವನ ಪೋಷಕರನ್ನು ಜೈಲಿಗೆ ಹಾಕುವಂತೆ ಮತ್ತು ಪತಿಯನ್ನು ಕೆಲಸದಿಂದ ತೆಗೆದುಹಾಕುವುದಕ್ಕೆ ಆಕೆ ಎಲ್ಲಾ ಪ್ರಯತ್ನ ಮಾಡಿದ್ದಾಳೆಂದು ಸೂಚಿಸುತ್ತದೆ.
ಅಲ್ಲದೇ, ಹೆಂಡತಿಯ ಈ ನಡವಳಿಕೆಯು ಪತಿಗೆ ಮಾನಸಿಕ ಕ್ರೌರ್ಯವನ್ನುಂಟು ಮಾಡಿದೆ ಎಂಬುದರಲ್ಲಿ ನಮಗೆ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಹೈಕೋರ್ಟ್ ವರದಿಯಲ್ಲಿ ಉಲ್ಲೇಖಿಸಿದೆ.