alex Certify ಸೊಳ್ಳೆಗಳಿಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಇಷ್ಟವಂತೆ……! ಅಧ್ಯಯನದಲ್ಲಿ ಅಚ್ಚರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆಗಳಿಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಇಷ್ಟವಂತೆ……! ಅಧ್ಯಯನದಲ್ಲಿ ಅಚ್ಚರಿ ಮಾಹಿತಿ ಬಹಿರಂಗ

ಸೊಳ್ಳೆ ಕಡಿತ ಸಾಮಾನ್ಯ ವಿಚಾರ. ಆದರೆ ಕೆಲವರು ತಮಗೆ ಹೆಚ್ಚು ಸೊಳ್ಳೆ ಕಡಿತವಾಗುತ್ತಿದೆ ಎಂದು ಹೇಳಿಕೊಂಡಿರುವುದನ್ನು ಕೇಳಿರುತ್ತೇವೆ. ಇದೇ ವಿಚಾರದಲ್ಲಿ ಅಧ್ಯಯನವೊಂದು ನಡೆದಿದ್ದು ಅಚ್ಚರಿ ಮಾಹಿತಿ ಹೊರಬಿದ್ದಿದೆ.

ಕೆಲವರು ಹೆಚ್ಚಾಗಿ ಸೊಳ್ಳೆ ಕಚ್ಚಿಸಿಕೊಳ್ಳುವುದಕ್ಕೆ ಏಕೆ ಗುರಿಯಾಗುತ್ತಾರೆ ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿವೆಯಾದರೂ, ವ್ಯಕ್ತಿಯ ಲಿಂಗ ಆಧಾರದಲ್ಲಿ ಏನಾದರೂ ಸಂಬಂಧ ಹೊಂದಿದೆಯೇ ಎಂಬುದನ್ನು ಪರಿಶೀಲಿಸುವುದು ಆಸಕ್ತಿದಾಯಕವಾಗಿದೆ. ಈಗ ಅಂತಹದ್ದೊಂದು ಸರ್ವೆ ನಡೆದಿದೆ.

ಮಹಿಳೆಯರಿಗಿಂತ ಪುರುಷರು ಸೊಳ್ಳೆಗಳಿಂದ ಆಕ್ರಮಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಕಂಡುಹಿಡಿದಿದೆ. ಈ ಅಧ್ಯಯನವನ್ನು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಮೂಲಕ ಸೊಳ್ಳೆಗಳು ಮಹಿಳೆಯರತ್ತ ಹೆಚ್ಚು ಆಕರ್ಷಿತವಾಗುತ್ತವೆ ಎಂಬ ಜನಪ್ರಿಯ ನಂಬಿಕೆಗೆ ವಿರುದ್ಧವಾದ ವರದಿ ಬಂದಿದೆ.

ಸೊಳ್ಳೆಗಳ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ, ಅವು ಕಚ್ಚುವುದು ಹೆಣ್ಣು ಸೊಳ್ಳೆ ಮಾತ್ರ. ಗಂಡುಸೊಳ್ಳೆಗಳು ನಿರುಪದ್ರವಿಗಳು. ಆದರೂ ಅವು ನಿಮ್ಮ ಸುತ್ತಲೂ ಸುಳಿದಾಡುವ ಮೂಲಕ ಕೆರಳಿಸಬಹುದು.

ಹೆಣ್ಣು ಸೊಳ್ಳೆಯು ತಮ್ಮ ಮೊಟ್ಟೆಗಳನ್ನು ಬೆಳೆಯಲು ಸಹಾಯ ಮಾಡಲು ಮಾನವ ದೇಹದ ರಕ್ತದಿಂದ ಪ್ರೋಟೀನ್‌ಗಳನ್ನು ಹೊರತೆಗೆಯುತ್ತದೆ. ಈ ಪ್ರೋಟೀನ್‌ನೊಂದಿಗೆ ಮೊಟ್ಟೆಗಳು ವೇಗವಾಗಿ ಬೆಳೆಯುತ್ತವೆ ಎಂಬುದು ಅಧ್ಯಯನ ವರದಿಯ ಪ್ರಮುಖ ಸಂಗತಿಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...