alex Certify ಸಿಮ್ಯುಲೇಟರ್ ಪ್ರಯೋಗದ ಮೂಲಕ ಮುಟ್ಟಿನ ನೋವು ಅನುಭವಿಸಿದ ಪುರುಷರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಮ್ಯುಲೇಟರ್ ಪ್ರಯೋಗದ ಮೂಲಕ ಮುಟ್ಟಿನ ನೋವು ಅನುಭವಿಸಿದ ಪುರುಷರು..!

ಪ್ರತಿ ತಿಂಗಳು, ಮಹಿಳೆಯರು ಮುಟ್ಟಿನ ಸೆಳೆತದ ಭಾರವನ್ನು ಹೊರಬೇಕಾಗುತ್ತದೆ. ಈ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗುಂಟಾಗುವ ಯಾತನೆ ಪುರುಷರಿಗೆ ತಿಳಿಯಲು ಸಾಧ್ಯವಿಲ್ಲ. ಆದರೆ, ಕೇರಳದ ಕೊಚ್ಚಿ ಮಾಲ್‌ನಲ್ಲಿ ಪುರುಷರು ಪಿರಿಯಡ್ ನೋವನ್ನು ಅನುಭವಿಸಿದ್ದಾರೆ.

ಸಾಮಾಜಿಕ ಪ್ರಯೋಗಕ್ಕೆ ಮುಂದಾದ ಮಾಲ್ ನಲ್ಲಿ ತಿಂಗಳ ಆ ಸಮಯದಲ್ಲಿ ಮಹಿಳೆಯರು ಅನುಭವಿಸುವ ಯಾತನೆಯ ಅನುಭವವನ್ನು ಹಲವಾರು ಪುರುಷರು ಅನುಭವಿಸಿದ್ದಾರೆ. ಹೌದು, ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ಎರ್ನಾಕುಲಂ ಸಂಸದರು ಈ ಪ್ರಯೋಗವನ್ನು ಕೈಗೊಂಡಿದ್ದಾರೆ.

ಪುರುಷರು ಈ ಪ್ರಯೋಗದಲ್ಲಿ ಪಾಲ್ಗೊಂಡಿದ್ದು, ನೋವನ್ನು ಅನುಭವಿಸಿದ್ದಾರೆ. ಸಿಮ್ಯುಲೇಟರ್ ಪ್ರಯೋಗದಿಂದಾಗಿ ಕೆಲವರು ನೋವಿನಿಂದ ಕಿರುಚಿದ್ದಾರೆ. ಅಗ್ರಿಮ್ ಪ್ರಕಾಶ್ ಅವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...