ಪ್ರತಿ ತಿಂಗಳು, ಮಹಿಳೆಯರು ಮುಟ್ಟಿನ ಸೆಳೆತದ ಭಾರವನ್ನು ಹೊರಬೇಕಾಗುತ್ತದೆ. ಈ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗುಂಟಾಗುವ ಯಾತನೆ ಪುರುಷರಿಗೆ ತಿಳಿಯಲು ಸಾಧ್ಯವಿಲ್ಲ. ಆದರೆ, ಕೇರಳದ ಕೊಚ್ಚಿ ಮಾಲ್ನಲ್ಲಿ ಪುರುಷರು ಪಿರಿಯಡ್ ನೋವನ್ನು ಅನುಭವಿಸಿದ್ದಾರೆ.
ಸಾಮಾಜಿಕ ಪ್ರಯೋಗಕ್ಕೆ ಮುಂದಾದ ಮಾಲ್ ನಲ್ಲಿ ತಿಂಗಳ ಆ ಸಮಯದಲ್ಲಿ ಮಹಿಳೆಯರು ಅನುಭವಿಸುವ ಯಾತನೆಯ ಅನುಭವವನ್ನು ಹಲವಾರು ಪುರುಷರು ಅನುಭವಿಸಿದ್ದಾರೆ. ಹೌದು, ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ಎರ್ನಾಕುಲಂ ಸಂಸದರು ಈ ಪ್ರಯೋಗವನ್ನು ಕೈಗೊಂಡಿದ್ದಾರೆ.
ಪುರುಷರು ಈ ಪ್ರಯೋಗದಲ್ಲಿ ಪಾಲ್ಗೊಂಡಿದ್ದು, ನೋವನ್ನು ಅನುಭವಿಸಿದ್ದಾರೆ. ಸಿಮ್ಯುಲೇಟರ್ ಪ್ರಯೋಗದಿಂದಾಗಿ ಕೆಲವರು ನೋವಿನಿಂದ ಕಿರುಚಿದ್ದಾರೆ. ಅಗ್ರಿಮ್ ಪ್ರಕಾಶ್ ಅವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.