
ಅಂದಿನ ದಿನಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ತಟ್ಟೆಯಲ್ಲಿ ಕೊಡುತ್ತಿದ್ದ ಖಾದ್ಯಗಳ ಫೋಟೋವೊಂದನ್ನು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಫ್ಲಾಶ್‌ಬ್ಯಾಕ್ ಮೋಡ್‌ಗೆ ನೆಟ್ಟಿಗರನ್ನು ಕೊಂಡೊಯ್ದಿದ್ದಾರೆ.
ಚಿತ್ರದಲ್ಲಿರುವ ಪ್ಲೇಟ್‌ನಲ್ಲಿ ಸಮೋಸಾ, ಆಲೂಗಡ್ಡೆ ಚಿಪ್ಸ್, ಬ್ಲ್ಯಾಕ್ ಫಾರೆಸ್ಟ್ ಕೇಕ್ ಮತ್ತು ನೆಸ್ಲೆ ಮಂಚ್ ಚಾಕೊಲೇಟ್‌ಗಳಿದ್ದು ನಮ್ಮದೇ ಬಾಲ್ಯದ ದಿನಗಳ ಸಂಭ್ರಮವನ್ನು ನೆನಪಿಸುತ್ತಿವೆ.