ಅಮೆರಿಕ ಅಧ್ಯಕ್ಷರ ಗಾದಿಗೆ ಮಾಜಿಯಾಗುತ್ತಲೇ ಡೊನಾಲ್ಡ್ ಟ್ರಂಪ್ರ ಮಡದಿಯ ಗಾದಿಗೆ ಮಾಜಿಯಾಗಲು ಮುಂದಾಗಿದ್ದ ಮೆಲಾನಿಯಾ ಟ್ರಂಪ್ ತಮ್ಮ ಹಳೆಯ ಹ್ಯಾಟ್ ಒಂದನ್ನು ಹರಾಜಿಗೆ ಇಡಲು ಮುಂದಾಗಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಮಡದಿ ಬ್ರಿಗಿಟ್ಟೆರನ್ನು ಭೇಟಿಯಾದ ವೇಳೆ ಅಮೆರಿಕದ ಅಂದಿನ ಮೊದಲ ಮಹಿಳೆ ಮೆಲಾನಿಯಾ ಬಿಳಿ ಬಣ್ಣದ ಈ ಹ್ಯಾಟ್ ಧರಿಸಿದ್ದರು.
ಕರ್ವಾ ಚೌತ್ ವ್ರತ ಮಾಡಲು ಮಡದಿಗೆ ಹೇಳಿರಬೇಕು ಟ್ರಂಪ್ ಎಂದ ಕಮೆಡಿಯನ್
ಮೆಲಾನಿಯಾ ಟ್ರಂಪ್ರ ಅಧಿಕೃತ ಜಾಲತಾಣದಲ್ಲಿ ಈ ಹ್ಯಾಟ್, ಒಂದು ಪೇಂಟಿಂಗ್ ಮತ್ತು ಎನ್ಎಫ್ಟಿ ಕಲಾಕೃತಿಯೊಂದರ ಗುಣಗಾನ ಮಾಡಲಾಗಿದ್ದು, ಅದನ್ನು ಫ್ರೆಂಚ್-ಅಮೆರಿಕನ್ ವಿನ್ಯಾಸಗಾರ ಹರ್ವೇ ಪಿಯೆರ್ರಿ ಡಿಸೈನ್ ಮಾಡಿದ್ದು, ಮೆಲಾನಿಯಾ ಇದನ್ನು ಏಪ್ರಿಲ್ 24, 2018ರಂದು ಧರಿಸಿದ್ದರು ಎಂದು ತಿಳಿಸಲಾಗಿದೆ.
51 ವರ್ಷ ವಯಸ್ಸಿನ ಮೆಲಾನಿಯಾರ ಈ ಹ್ಯಾಟ್ ಮತ್ತು ಎರಡು ಕಲಾಕೃತಿಗಳು ಜನವರಿ 11ರಂದು ಹರಾಜಿಗೆ ಒಳಗಾಗಲಿದ್ದು, $250,000ಗಳ (1.8 ಕೋಟಿ ರೂಪಾಯಿ) ಆರಂಭಿಕ ಬೆಲೆಯಿಂದ ಬಿಡ್ ಕೂಡಲಾಗುತ್ತದೆ. ಕ್ರಿಪ್ಟೋಕರೆನ್ಸಿ ಮೂಲಕವೂ ಬಿಡ್ನಲ್ಲಿ ಭಾಗವಹಿಸಬಹುದಾಗಿದೆ.
ಈ ಎಲ್ಲಾ ವಸ್ತುಗಳ ಮೇಲೂ ಮೆಲಾನಿಯಾ ಹಸ್ತಾಕ್ಷರ ಇರಲಿದೆ. ಹರಾಜಿನಲ್ಲಿ ಸಂಗ್ರಹವಾದ ದುಡ್ಡಿನ ಒಂದಂಶವನ್ನು ಮಕ್ಕಳಿಗೆ ಕಂಪ್ಯೂಟರ್ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಒದಗಿಸಲು ಬಳಸಲಾಗುತ್ತದೆ ಎನ್ನಲಾಗಿದೆ.
“ದೇಶದ ಮುಖ್ಯಸ್ಥರ ಸಂಗ್ರಹ” ಎಂದು ಈ ವಸ್ತುಗಳನ್ನು ಬಣ್ಣಿಸಿರುವ ಮೆಲಾನಿಯಾ, ಹರಾಜಿನ ಬಗ್ಗೆ ಟ್ವಿಟರ್ನಲ್ಲಿ ಘೋಷಿಸಿದ್ದಾರೆ.