ಶ್ವೇತಭವನದಲ್ಲಿ ಟೆನ್ನಿಸ್ ಪೆವಿಲಿಯನ್ ನಿರ್ಮಿಸಿದ ಡೊನಾಲ್ಡ್ ಪತ್ನಿ 08-12-2020 7:14PM IST / No Comments / Posted In: Latest News, Live News, International ಡೊನಾಲ್ಡ್ ಟ್ರಂಪ್ರ ಪತ್ನಿ ಮೆಲೆನಿಯಾ ಟ್ರಂಪ್ ಶ್ವೇತಭವನದ ಮೈದಾನದಲ್ಲಿ ಹೊಸ ಟೆನ್ನಿಸ್ ಮೈದಾನದ ಪೆವಿಲಿಯನ್ ನಿರ್ಮಿಸೋದ್ರ ಮೂಲಕ ವೈಟ್ ಹೌಸ್ನಲ್ಲಿ ತಮ್ಮ ಶಾಶ್ವತ ನೆನಪನ್ನ ಉಳಿಸಿದ್ದಾರೆ. ಈ ಬಗ್ಗೆ ಟ್ವಿಟರ್ ಪೋಸ್ಟ್ ಮೂಲಕ ಮೆಲೆನಿಯಾ ಮಾಹಿತಿ ನೀಡಿದ್ದಾರೆ. ಈ ಪೆವಿಲಿಯನ್ ನಿರ್ಮಾಣ ಕಾರ್ಯ ಅಕ್ಟೋಬರ್ನಲ್ಲಿ ಆರಂಭವಾಗಿತ್ತು. ಶ್ವೇತಭವನದ ಹುಲ್ಲುಹಾಸಿನ ಲಾನ್ 18 ಅಡಿ ಎತ್ತರವಾಗಿದೆ. ಈ ಕೋರ್ಟ್ ಲಾಕರ್ ಕೊಠಡಿಯನ್ನ ಹೊಂದಿದೆ. ಶ್ವೇತಭವನದ ದಕ್ಷಿಣ ಮೈದಾನವು 20ನೇ ಶತಮಾನದ ಆರಂಭದಿಂದಲೂ ಮನರಂಜನಾ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ. ಶ್ವೇತಭವನದಲ್ಲಿ ವಾಸ ಮಾಡಿರುವ ಪ್ರತಿಯೊಬ್ಬ ಅಧ್ಯಕ್ಷರು ಶ್ವೇತಭವನದಲ್ಲಿ ಒಂದಿಲ್ಲೊಂದು ನೆನಪನ್ನ ಉಳಿಸಿ ಹೋಗಿದ್ದಾರೆ. ಜಿಮ್ಮಿ ಕಾರ್ಟರ್ ಟ್ರೀ ಹೌಸ್ ನಿರ್ಮಿಸಿದ್ದರು. ಬಿಲ್ ಕ್ಲಿಂಟನ್ ಏಳು ಆಸನಗಳ ಹಾಟ್ ಟಬ್ ನಿರ್ಮಿಸಿದ್ದರು. ಥಿಯೋಡರ್ ರೂಸ್ವೆಲ್ಟ್ ಟೆನ್ನಿಸ್ ಕೋರ್ಟ್ ಸ್ಥಾಪಿಸಿದ್ದರು . ಬರಾಕ್ ಒಬಾಮಾ ಬಾಸ್ಕೆಟ್ ಬಾಲ್ ಕೋರ್ಟ್ ರೇಖೆಗಳನ್ನ ಚಿತ್ರಿಸಿದ್ದರು. History continues to unfold at the @WhiteHouse & I am pleased to announce the completion of the tennis pavilion. Preserving this historic landmark is vital & I want to thank all who helped complete this project. pic.twitter.com/8NAjbYViS0 — Melania Trump 45 Archived (@FLOTUS45) December 7, 2020