ರೋಲ್ಸ್ ರಾಯ್ಸ್‌ನ ’ಸ್ಪಿರಿಟ್ ಆಫ್ ಇನೋವೇಷನ್’ ಹೆಸರಿನ ಎಲೆಕ್ಟ್ರಿಕ್ ವಿಮಾನವು ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ವೇಗದ ಎಲೆಕ್ಟ್ರಿಕ್ ವಿಮಾನವೆಂಬ ಶ್ರೇಯಕ್ಕೆ ಪಾತ್ರವಾಗಿದೆ.
ಹೊಸದಾಗಿ ಮೂರು ದಾಖಲೆಗಳನ್ನು ಸೃಷ್ಟಿಸಿರುವ ಈ ವಿಮಾನವು ಮೂರು ಕಿಮೀಗಳಷ್ಟು ದೂರವನ್ನು 556 ಕಿಮೀ/ಗಂಟೆ ವೇಗದಲ್ಲಿ ಕ್ರಮಿಸಿದೆ. ಈ ಹಿಂದೆ 213ಕಿಮೀ/ಗಂಟೆಯೇ ಎಲೆಕ್ಟ್ರಿಕ್ ವಿಮಾನವೊಂದರ ಅತ್ಯಂತ ವೇಗದ ಹಾರಾಟವಾಗಿತ್ತು.
ಬ್ರಿಟನ್‌ನ ರಕ್ಷಣಾ ಸಚಿವಾಲಯದ ಬಾಸ್ಕೋಂಬೆ ಡೌನ್ ವೈಮಾನಿಕ ಪ್ರಯೋಗದ ತಾಣದಲ್ಲಿ ನಡೆದ ಪರೀಕ್ಷೆಯಲ್ಲಿ ಈ ರೋಲ್ಸ್ ರಾಯ್ಸ್‌ನ ಈ ವಿಮಾನವು 532.1ಕಿಮೀ/ಗಂಟೆಯ ವೇಗ ಸಾಧಿಸಿದೆ. ಜೊತೆಗೆ 202 ಸೆಕೆಂಡ್‌ಗಳಲ್ಲಿ 3000 ಮೀಟರ್‌ಗಳ ಎತ್ತರ ತಲುಪಿದ ವಿಮಾನ, ಈ ಎತ್ತರ ಸಾಧಿಸಲು ತೆಗೆದುಕೊಂಡ ಸಮಯದಲ್ಲೂ 60 ಸೆಕೆಂಡ್‌ಗಳ ಅಂತರದಿಂದ ದಾಖಲೆ ಸೃಷ್ಟಿಸಿದೆ.
ಗಂಟೆಗೆ 623ಕಿಮೀ ವೇಗದಲ್ಲಿ ಕ್ರಮಿಸಬಲ್ಲ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ವಿಮಾನದ ಈ ಶರವೇಗವನ್ನು ಫೆಡರೇಷನ್ ಏರೋನಾಟಿಕ್ ಇಂಟರ್ನ್ಯಾಷನಲ್ (ಎಫ್‌ಎಐ) ಅಧಿಕೃತವಾಗಿ ಮಾನ್ಯೀಕರಿಸಿದೆ.