alex Certify ಮಾಜಿ ಸೈಕಲ್ ಮೆಕ್ಯಾನಿಕ್ ಗೆ ಒಲಿದ ಪದ್ಮಶ್ರೀ: 25 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ ಶರೀಫ್ ಹಿಂದಿದೆ ನೋವಿನ ಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸೈಕಲ್ ಮೆಕ್ಯಾನಿಕ್ ಗೆ ಒಲಿದ ಪದ್ಮಶ್ರೀ: 25 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ ಶರೀಫ್ ಹಿಂದಿದೆ ನೋವಿನ ಕತೆ

ನವದೆಹಲಿ: ಭಾರತ ಸರ್ಕಾರ ಕೊಡುವ ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು ಮೊಹಮ್ಮದ್ ಶರೀಫ್ ಅವರಿಗೆ ನೀಡಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಜಿ ಸೈಕಲ್ ಮೆಕ್ಯಾನಿಕ್ ಮೊಹಮ್ಮದ್ ಶರೀಫ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶರೀಫ್ ಚಾಚಾ ಎಂದೇ ಜನಪ್ರಿಯರಾಗಿರುವ ಮೊಹಮ್ಮದ್ ಶರೀಫ್ ಕಳೆದ ಮೂರು ದಶಕದ ಅವಧಿಯಲ್ಲಿ 25 ಸಾವಿರಕ್ಕೂ ಅಧಿಕ ಅನಾಥ ಶವಗಳ ಸಂಸ್ಕಾರ ಮಾಡಿದ್ದಾರೆ.

1992ರಲ್ಲಿ ಬಾಬರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಕೋಮು ಉದ್ವಿಗ್ನತೆ ಉತ್ತುಂಗದಲ್ಲಿತ್ತು. ಈ ವೇಳೆ ಅವರ ಮಗ ರಾಯಿಸ್ ಹತ್ಯೆಯಾಗಿತ್ತು. ಆ ಘಟನೆಯ ನಂತರ ಸಮಾಜಸೇವೆಗೆ ಮುಂದಾದ ಇವರು ಈವರೆಗೆ 25 ಸಾವಿರಕ್ಕೂ ಅಧಿಕ ಅನಾಥ ಶವಗಳ ಸಂಸ್ಕಾರ ಮಾಡಿದ್ದಾರೆ.

ರಸಾಯನಶಾಸ್ತ್ರಜ್ಞನಾಗಿದ್ದ ಶರೀಫ್ ಅವರ ಮಗ ರಾಯಿಸ್ ಸುಲ್ತಾನ್ ಪುರಕ್ಕೆ ಹೋಗುವಾಗ ಕೋಮುಗಲಭೆಯಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ರೈಲ್ವೆ ಹಳಿಗಳ ಬಳಿ ಎಸೆದು ಬೀದಿನಾಯಿಗಳು ಅದನ್ನು ತಿಂದಿದ್ದವು. ಊಹಿಸಲಾಗದ ಸ್ಥಿತಿಯಲ್ಲಿ ಮಗನನ್ನು ಕಳೆದುಕೊಂಡಿದ್ದ ಶರೀಫ್ ನಂತರ ಅನಾಥ ಮೃತದೇಹಗಳ ಸಂಸ್ಕಾರ ಮಾಡಲು ಮುಂದಾದರು.

ಅನಾಥ ಮೃತದೇಹಗಳ ದಹನ ಅಥವಾ ಸಮಾಧಿ ಮಾಡಿ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ. ಅಗಲಿದವರಿಗೆ ಗೌರವ ನೀಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹೀಗೆ ಎಲ್ಲ ಧರ್ಮದ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಅಯೋಧ್ಯೆಯಲ್ಲಿ 72 ಗಂಟೆಗಳ ಕಾಲ ಯಾರೂ ಪಡೆಯದ ಮೃತದೇಹಗಳನ್ನು ಪೊಲೀಸರು ಶರೀಫ್ ಅವರಿಗೆ ಹಸ್ತಾಂತರಿಸುತ್ತಾರೆ. ಶರೀಫ್ ಅವರ ಉದಾತ್ತ ಕಾರ್ಯ ಕೇಳಿದ ನಟ ಅಮೀರ್ ಖಾನ್ ‘ಸತ್ಯಮೇವ ಜಯತೆ’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು. 2020 ರಲ್ಲಿ ಶರೀಫ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದ್ದು, ಕೊರೋನಾ ಕಾರಣದಿಂದಾಗಿ ಕಳೆದ ವರ್ಷ ಸಮಾರಂಭ ರದ್ದುಗೊಳಿಸಲಾಗಿತ್ತು. ಈ ವರ್ಷ ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...