ಕೊರೊನಾ ಲಸಿಕೆಗಾಗಿ ಕಾಯುತ್ತಿರುವವರ ಸಂಖ್ಯೆ ಒಂದೆಡೆಯಾದರೆ ಲಸಿಕೆಯಿಂದ ಜೀವಕ್ಕೆ ಏನಾದರೂ ಹಾನಿಯಾಗಿಬಿಡುತ್ತೇನೋ ಅಂತಾ ಹೆದರುವವರ ಪಂಗಡವೇ ಇನ್ನೊಂದು ಕಡೆ. ಲಸಿಕೆ ಅಂದರೆ ಸಾಕು ಹೆದರಿಕೊಳ್ಳುವವರ ನಡುವೆ ಬರೋಬ್ಬರಿ 96 ವರ್ಷದ ವೃದ್ಧೆ ಲಸಿಕಾ ಕೇಂದ್ರಕ್ಕೆ ಹೋಗಿ ಮೊದಲ ಡೋಸ್ ಪಡೆಯುವ ಮೂಲಕ ಎಲ್ಲರಿಗೂ ಮಾದರಿ ಎನಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದು ಓರ್ವ ಪ್ರಯಾಣಿಕ ಮಾತ್ರ…!
ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಇವರು ಲಸಿಕೆ ಸ್ವೀಕರಿಸಿದ್ದಾರೆ.
ನಾಗ್ಲಾ ಕಾಧೇರಿ ಎಂಬ ಗ್ರಾಮದಲ್ಲಿ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಹೀಗೆ ಯಾರೇ ಮನವೊಲಿಸಲು ಯತ್ನಿಸಿದ್ದರೂ ಸಹ ಗ್ರಾಮಸ್ಥರು ಲಸಿಕೆ ಪಡೆಯಲು ಮುಂದೆ ಬರಲಿಲ್ಲ. ಲಸಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎಲ್ಲರೂ ಮನೆಯಿಂದ ಹೊರಬಾರದೇ ಕುಳಿತಿದ್ದರು. ಆದರೆ 96 ವರ್ಷದ ಆಧಾರ್ ಕುಮಾರಿ ಮಾತ್ರ ಲಸಿಕೆ ಪಡೆಯಲು ಒಪ್ಪಿಗೆ ನೀಡಿದ್ದಾರೆ.
ಲಸಿಕೆ ಪಡೆದ ಬಳಿಕ ಗ್ರಾಮಸ್ಥರನ್ನ ಕರೆದ ಆಧಾರ್ ಕುಮಾರಿ ಮೊದಲ ಡೋಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಲಸಿಕಾ ಕೇಂದ್ರದಲ್ಲಿ ಜನ ಜಮಾಯಿಸಿದ್ದರು ಎಂದು ತಹಶೀಲ್ದಾರ್ ಅಜಯ್ ಕುಮಾರ್ ಹೇಳಿದ್ರು.