alex Certify ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದು ಓರ್ವ ಪ್ರಯಾಣಿಕ ಮಾತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದು ಓರ್ವ ಪ್ರಯಾಣಿಕ ಮಾತ್ರ…!

ಅಮೃತ್​ಸರದಿಂದ ದುಬೈವರೆಗೆ ಏರ್​ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ವೇಳೆ ನನಗೆ ಮಹಾರಾಜನಂತೆ ಎನಿಸುತ್ತಿತ್ತು ಎಂದು ಅರಬ್​ ರಾಷ್ಟ್ರದ ಉದ್ಯಮಿ ಅನುಭವ ಹಂಚಿಕೊಂಡಿದ್ದಾರೆ.

ಎಸ್​ಪಿ ಸಿಂಗ್​ ಓಬೆರಾಯ್​ ಎಂಬವರು ಬುಧವಾರ ಏರ್​​ ಇಂಡಿಯಾ ವಿಮಾನದಲ್ಲಿ ಒಬ್ಬರೇ ಮೂರು ಗಂಟೆಗಳ ಕಾಲ ಪ್ರಯಾಣ ಮಾಡಿದ್ದಾರೆ.

ಜೂನ್​ 23ರ ಬೆಳಗ್ಗೆ 4 ಗಂಟೆ ಸುಮಾರಿಗೆ ನಾನು ಅಮೃತಸರದಿಂದ ದುಬೈಗೆ ಪ್ರಯಾಣ ಮಾಡಲು ಏರ್​ ಇಂಡಿಯಾ ವಿಮಾನವನ್ನ ಏರಿದೆ. ನಾನು ಎಷ್ಟು ಅದೃಷ್ಟವಂತ ಎಂದರೆ ಇಡೀ ವಿಮಾನದಲ್ಲಿ ಪ್ರಯಾಣಿಕನಂತೆ ಇದ್ದದ್ದು ನಾನು ಮಾತ್ರ. ನನಗಂತೂ ಈ ಪ್ರಯಾಣದ ತುಂಬೆಲ್ಲ ಮಹಾರಾಜನಂತೆ ಭಾಸವಾಗುತ್ತಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ರು.

ತನ್ನ ಸಾಲದ ಮಾಹಿತಿ ಕಂಡು ಬೆಚ್ಚಿಬಿದ್ಲು ಯುವತಿ…!

ದುಬೈನಲ್ಲಿ ಓಬೆರಾಯ್​ 10 ವರ್ಷದ ಗೋಲ್ಡನ್​ ವೀಸಾ ಹೊಂದಿದ್ದಾರೆ. ಏರ್​ ಇಂಡಿಯಾ ಸಿಬ್ಬಂದಿ ನನ್ನನ್ನ ಚೆನ್ನಾಗಿ ಉಪಚರಿಸಿದ್ದಾರೆ. ಮಾತ್ರವಲ್ಲದೇ ಖಾಲಿ ವಿಮಾನದಲ್ಲಿ ಕೂತಿದ್ದ ನನ್ನ ಫೋಟೋವನ್ನೂ ಕ್ಲಿಕ್ಕಿಸಲಾಯ್ತು ಎಂದು ಹೇಳಿದ್ದಾರೆ.

ಹರಿಕಥೆ ಮಾದರಿಯಲ್ಲೇ ಶುರುವಾಯ್ತು ಏಸು ಕಥೆ…!

ಇದೆಲ್ಲದರ ಜೊತೆಯಲ್ಲಿ ವಿಮಾನದಲ್ಲಿ ಒಬ್ಬನೇ ಇದ್ದುದ್ದರಿಂದ ಕೊಂಚ ಬೇಸರವೂ ಆಯಿತು. ಟೈಮ್​ ಪಾಸ್​ ಮಾಡುವ ಸಲುವಾಗಿ ನಾನು ವಿಮಾನದ ಸೀಟು, ಕಿಟಕಿಗಳನ್ನ ಲೆಕ್ಕ ಹಾಕುತ್ತಿದ್ದೆ ಎಂದು ಹೇಳಿದ್ದಾರೆ.

ಒಂದು ವೇಳೆ ನನಗೆ ಇನ್ನೊಂದು ಬಾರಿ ಏಕಾಂಗಿ ವಿಮಾನ ಯಾನಕ್ಕೆ ಕರೆದರೆ ಬಹುಶಃ ನಾನದನ್ನ ನಿರಾಕರಿಸುತ್ತೇನೆ. ಜೀವನದಲ್ಲಿ ಒಮ್ಮೆ ಈ ಅನುಭವ ಸಾಕು. ಸಿಕ್ಕಾಪಟ್ಟೆ ಬೋರೆನಿಸುತ್ತೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...