alex Certify ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಪಾನ್​ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ.

ಹೀಗಾಗಿಯೇ ಪಾನ್​ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. ಆದರೆ, ಇದರ ಬೆಲೆ ಎಷ್ಟಿರಬಹುದು? ಸಾಮಾನ್ಯವಾಗಿ ಕೈಗೆಟಕುವಂತಿರುತ್ತದೆ. 25-30 ಸಾಮಾನ್ಯ ದರ.

ಇಲ್ಲೊಂದು ಪಾನ್​ ಅಂಗಡಿಯಲ್ಲಿ ಇದರ ಬೆಲೆ ಸ್ಮಾರ್ಟ್​ಫೋನ್​ನಷ್ಟೇ ಇದೆ. ಅಚ್ಚರಿ ಎನಿಸಿಸಿತಾ? ನಂಬಲೇ ಬೇಕು.

ಮೀರತ್​ನ ನವಾಬ್​-ಎ- ಪಾನ್​ ಭಂಡಾರ್​ನಲ್ಲಿ 200 ಬಗೆಯ ಪಾನ್​ಗಳನ್ನು ಮಾರಾಟ ಮಾಡಲಾಗುತ್ತದೆ, ಎಲ್ಲವನ್ನೂ ವಿಶೇಷವಾಗಿ ತಯಾರಿಸಲಾಗುತ್ತದೆ.

ಇಲ್ಲಿರುವ ನಿರ್ದಿಷ್ಟ ರೀತಿಯ ಹಬ್ಬದ ಪಾನ್​ ಬೀಡಾಗೆ ಸ್ಮಾರ್ಟ್​ಫೋನ್​ನಷ್ಟೇ ವೆಚ್ಚವಾಗುತ್ತದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಪಾನ್​ಗಳನ್ನು ನೋಡಿದ್ದೀರಾ, ಹೆಚ್ಚೆಂದರೆ ಅದರ ಬೆಲೆ 1000- 1,100 ರೂ. ಇರಬಹುದು. ಆದರೆ ನವಾಬ್​-ಎ-ಪಾನ್​ ಭಂಡಾರ್​ನಲ್ಲಿ ವಿಶೇಷ ಪಾನ್​ ಬೀಡಾಗೆ ಸುಮಾರು 11,000 ರೂ. ಆಗಲಿದೆ.

ಈ ವೈವಿಧ್ಯಮಯ ಬೀಡಾವನ್ನು ಮದುವೆ, ನಿಶ್ಚಿತಾರ್ಥದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ವಿಶೇಷ ಆರ್ಡರ್​ಗಳಿಗೆ ಮಾತ್ರ ತಯಾರಿಸಲಾಗುತ್ತದೆ.

ನವಾಬ್​-ಎ- ಪಾನ್​ ಭಂಡಾರ್​ ಅನೇಕ ಗ್ರಾಹಕರು ತಮ್ಮ ಕುಟುಂಬಗಳೊಂದಿಗೆ ಇಲ್ಲಿನ ವಿಶೇಷತೆ ಆನಂದಿಸಲು ಬರುತ್ತಿದ್ದಾರೆ. ಮಕ್ಕಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಂಗಡಿಯು ವಿಶೇಷ ಚಾಕೊಲೇಟ್​ ಪಾನ್​ ಅನ್ನು ಸಿದ್ಧಪಡಿಸುತ್ತದೆ. ಇದು ಸಹ ವಿಭಿನ್ನ ರುಚಿಗಳಲ್ಲಿಯೂ ಇರಲಿದೆ.

ಇಲ್ಲಿ 25 ರೂ.ಗೂ ಪಾನ್​ ಬೀಡಾ ಕೂಡ ಸಿಗಲಿದೆ. ಸಾದಾ ಪಾನ್​, ಸ್ವೀಟ್​ ಪಾನ್​ ಚಾಕೊಲೇಟ್​, ವಿಶೇಷ ಗೋಲ್ಡನ್​ ಪಾನ್​, ಚಟ್ನಿ ಪಾನ್​, ಪಿಂಕ್​ ಚಟ್ನಿ ಪಾನ್​, ಮಾವಿನ ಚಟ್ನಿ ಪಾನ್​, ಅನಾನಸ್​ ಚಟ್ನಿ ಪಾನ್​, ಸ್ಟ್ರಾಬೆರಿ ಚಟ್ನಿ ಪಾನ್​, ಚಾಕೊಲೇಟಿ ಚಟ್ನಿ ಪಾನ್, ಐಸ್​ ಕ್ರೀಮ್​ ಪಾನ್​, ರಾಸ್ಯಾಮಲೈ ಚಟ್ನಿ ಪಾನ್​, ಹಸಿ ಮಾವಿನಕಾಯಿ ಚಟ್ನಿ ಪಾನ್​ ಮಾತ್ರ ಕೆಲವು ವಿಧಗಳಲ್ಲಿ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...