ಪಾನ್ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ.
ಹೀಗಾಗಿಯೇ ಪಾನ್ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. ಆದರೆ, ಇದರ ಬೆಲೆ ಎಷ್ಟಿರಬಹುದು? ಸಾಮಾನ್ಯವಾಗಿ ಕೈಗೆಟಕುವಂತಿರುತ್ತದೆ. 25-30 ಸಾಮಾನ್ಯ ದರ.
ಇಲ್ಲೊಂದು ಪಾನ್ ಅಂಗಡಿಯಲ್ಲಿ ಇದರ ಬೆಲೆ ಸ್ಮಾರ್ಟ್ಫೋನ್ನಷ್ಟೇ ಇದೆ. ಅಚ್ಚರಿ ಎನಿಸಿಸಿತಾ? ನಂಬಲೇ ಬೇಕು.
ಮೀರತ್ನ ನವಾಬ್-ಎ- ಪಾನ್ ಭಂಡಾರ್ನಲ್ಲಿ 200 ಬಗೆಯ ಪಾನ್ಗಳನ್ನು ಮಾರಾಟ ಮಾಡಲಾಗುತ್ತದೆ, ಎಲ್ಲವನ್ನೂ ವಿಶೇಷವಾಗಿ ತಯಾರಿಸಲಾಗುತ್ತದೆ.
ಇಲ್ಲಿರುವ ನಿರ್ದಿಷ್ಟ ರೀತಿಯ ಹಬ್ಬದ ಪಾನ್ ಬೀಡಾಗೆ ಸ್ಮಾರ್ಟ್ಫೋನ್ನಷ್ಟೇ ವೆಚ್ಚವಾಗುತ್ತದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಪಾನ್ಗಳನ್ನು ನೋಡಿದ್ದೀರಾ, ಹೆಚ್ಚೆಂದರೆ ಅದರ ಬೆಲೆ 1000- 1,100 ರೂ. ಇರಬಹುದು. ಆದರೆ ನವಾಬ್-ಎ-ಪಾನ್ ಭಂಡಾರ್ನಲ್ಲಿ ವಿಶೇಷ ಪಾನ್ ಬೀಡಾಗೆ ಸುಮಾರು 11,000 ರೂ. ಆಗಲಿದೆ.
ಈ ವೈವಿಧ್ಯಮಯ ಬೀಡಾವನ್ನು ಮದುವೆ, ನಿಶ್ಚಿತಾರ್ಥದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ವಿಶೇಷ ಆರ್ಡರ್ಗಳಿಗೆ ಮಾತ್ರ ತಯಾರಿಸಲಾಗುತ್ತದೆ.
ನವಾಬ್-ಎ- ಪಾನ್ ಭಂಡಾರ್ ಅನೇಕ ಗ್ರಾಹಕರು ತಮ್ಮ ಕುಟುಂಬಗಳೊಂದಿಗೆ ಇಲ್ಲಿನ ವಿಶೇಷತೆ ಆನಂದಿಸಲು ಬರುತ್ತಿದ್ದಾರೆ. ಮಕ್ಕಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಂಗಡಿಯು ವಿಶೇಷ ಚಾಕೊಲೇಟ್ ಪಾನ್ ಅನ್ನು ಸಿದ್ಧಪಡಿಸುತ್ತದೆ. ಇದು ಸಹ ವಿಭಿನ್ನ ರುಚಿಗಳಲ್ಲಿಯೂ ಇರಲಿದೆ.
ಇಲ್ಲಿ 25 ರೂ.ಗೂ ಪಾನ್ ಬೀಡಾ ಕೂಡ ಸಿಗಲಿದೆ. ಸಾದಾ ಪಾನ್, ಸ್ವೀಟ್ ಪಾನ್ ಚಾಕೊಲೇಟ್, ವಿಶೇಷ ಗೋಲ್ಡನ್ ಪಾನ್, ಚಟ್ನಿ ಪಾನ್, ಪಿಂಕ್ ಚಟ್ನಿ ಪಾನ್, ಮಾವಿನ ಚಟ್ನಿ ಪಾನ್, ಅನಾನಸ್ ಚಟ್ನಿ ಪಾನ್, ಸ್ಟ್ರಾಬೆರಿ ಚಟ್ನಿ ಪಾನ್, ಚಾಕೊಲೇಟಿ ಚಟ್ನಿ ಪಾನ್, ಐಸ್ ಕ್ರೀಮ್ ಪಾನ್, ರಾಸ್ಯಾಮಲೈ ಚಟ್ನಿ ಪಾನ್, ಹಸಿ ಮಾವಿನಕಾಯಿ ಚಟ್ನಿ ಪಾನ್ ಮಾತ್ರ ಕೆಲವು ವಿಧಗಳಲ್ಲಿ ಲಭ್ಯವಿದೆ.