alex Certify ಎಲ್ಲ ಸರ್ಕಾರಿ, ಅನುದಾನಿತ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ: ಪೌಷ್ಟಿಕಾಂಶ ಹೆಚ್ಚಳಕ್ಕೆ ಸಾರವರ್ಧಿತ ಅಕ್ಕಿಯ ಬಿಸಿಯೂಟ, ‘ಕ್ಷೀರಭಾಗ್ಯ’ ಪುನಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲ ಸರ್ಕಾರಿ, ಅನುದಾನಿತ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ: ಪೌಷ್ಟಿಕಾಂಶ ಹೆಚ್ಚಳಕ್ಕೆ ಸಾರವರ್ಧಿತ ಅಕ್ಕಿಯ ಬಿಸಿಯೂಟ, ‘ಕ್ಷೀರಭಾಗ್ಯ’ ಪುನಾರಂಭ

ಬೆಂಗಳೂರು: ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ ಬಳಕೆ ಮಾಡಲಾಗುತ್ತದೆ. ಪೌಷ್ಟಿಕಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ನವೆಂಬರ್ 1 ರಿಂದ ಬಿಸಿಯೂಟ ಮತ್ತು ಕ್ಷೀರಭಾಗ್ಯಕ್ಕೆ ಚಾಲನೆ ನೀಡಲಾಗುವುದು.

ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆಗಾಗಿ ಸಾರವರ್ಧಿತ ಅಕ್ಕಿ ಬಳಸಲಾಗುತ್ತದೆ

ಕೊರೋನಾ ಕಾರಣದಿಂದಾಗಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ನವೆಂಬರ್ 1 ರಿಂದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗೆ ಚಾಲನೆ ಸಿಗಲಿದೆ ಎಂದು ಹೇಳಲಾಗಿದೆ.

ಪೋಷಕಾಂಶಗಳನ್ನು ಸಂಯೋಜಿಸಿ ತಯಾರಿಸಲಾದ ಸಾರವರ್ಧಿತ ಅಕ್ಕಿಯೊಂದಿಗೆ ತಯಾರಿಸಿದ ಬಿಸಿಯೂಟ ನೀಡಲಾಗುವುದು. ಬಿಸಿಯೂಟಕ್ಕೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. 6 ರಿಂದ 10 ನೇ ತರಗತಿ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ದಸರಾ ಮುಗಿದ ನಂತರ 1 ರಿಂದ 5 ನೇ ತರಗತಿ ಭೌತಿಕ ತರಗತಿ ಆರಂಭಿಸಲಿದ್ದು, ಬಿಸಿಯೂಟಕ್ಕಾಗಿ ಸಿಲಿಂಡರ್, ಪಾತ್ರೆ, ಧಾನ್ಯ, ಎಣ್ಣೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...