
ಆದರೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿರುವ ಘಟನೆಯೊಂದು ಮಾನವೀಯತೆ ಉಳ್ಳವರು ತಲೆತಗ್ಗಿಸುವಂತೆ ಮಾಡಿದೆ. ಎಂಬಿಎ ವಿದ್ಯಾರ್ಥಿಯೊಬ್ಬ ಕರೆಯದೆ ಬಂದು ಮದುವೆ ಮನೆಯಲ್ಲಿ ಊಟ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ಹಿಡಿದು ಪಾತ್ರೆ ತೊಳೆಸಲಾಗಿದೆ. ಅಷ್ಟೇ ಅಲ್ಲ ಇದರ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.
ಜಬಲ್ಪುರ ಮೂಲದ ಈ ವಿದ್ಯಾರ್ಥಿ ಭೋಪಾಲ್ ನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಸಮೀಪದಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಹೋಗಿ ಊಟ ಮಾಡಿದ್ದಾನೆ. ಆದರೆ ಈತ ಹೆಣ್ಣಿನ ಅಥವಾ ಗಂಡಿನ ಕುಟುಂಬಕ್ಕೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂಬುದನ್ನು ಕಂಡುಕೊಂಡ ಕೆಲವರು ಆತನನ್ನು ಹಿಡಿದು ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಕೊನೆಯಲ್ಲಿ ಆತ, ನಾನು ಈ ಮದುವೆ ಮನೆಯಲ್ಲಿ ಪುಕ್ಕಟೆಯಾಗಿ ಊಟ ಮಾಡಿದೆ. ಅದಕ್ಕಾಗಿ ಏನಾದರೂ ಕೆಲಸ ಮಾಡಬೇಕೆಂಬ ಕಾರಣಕ್ಕೆ ಪಾತ್ರೆ ತೊಳೆದಿದ್ದಾನೆ ಎಂದು ಹೇಳಿದ್ದಾನೆ. ಇದನ್ನು ಕೂಡ ಬಲವಂತವಾಗಿ ಹೇಳಿಸಿದಂತೆ ಕಾಣುತ್ತದೆ. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೆಣ್ಣು – ಗಂಡಿನ ಕುಟುಂಬಕ್ಕೆ ಛೀಮಾರಿ ಹಾಕುತ್ತಿದ್ದಾರೆ.