alex Certify BIG NEWS: ಮೇ 2 ರಿಂದ 4 ರವರೆಗೆ ಅಗತ್ಯ ಸೇವೆಗಳ ಮತದಾರರಿಗೆ ಮತದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೇ 2 ರಿಂದ 4 ರವರೆಗೆ ಅಗತ್ಯ ಸೇವೆಗಳ ಮತದಾರರಿಗೆ ಮತದಾನ

ಬೆಂಗಳೂರು: ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ 2 ರಿಂದ 4 ರವರೆಗೆ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯುವ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

ಚುನಾವಣಾ ಆಯೋಗದ ಸೂಚನೆ ಮೇರೆಗೆ ರಾಜ್ಯ ಸರ್ಕಾರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಸೇವೆಯಡಿ ಬರುವ ಗೈರುಹಾಜರಿ ಮತದಾರರಿಗೆ ಮೇ 2 ರಿಂದ 6ರ ಅವಧಿಯಲ್ಲಿ ಮೂರು ದಿನಗಳ ಕಾಲ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯುವಂತೆ ಚುನಾವಣೆ ಆಯೋಗ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮೇ 2 ರಿಂದ 4ರವರೆಗೆ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯಲಾಗಿರುವುದು.

ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಕುರಿತು ಚರ್ಚೆ ನಡೆಸಿ ಅಗತ್ಯ ಸೇವೆಯಡಿ ಬರುವ ಗೈರುಹಾಜರಿ ಮತದಾರರಿಗೆ ಪೋಸ್ಟ್ ವೋಟಿಂಗ್ ಸೆಂಟರ್ ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ಮೇ 2 ರಿಂದ 4 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ಆಯೋಗದ ಮಾರ್ಗಸೂಚಿಗಳ ಅನ್ವಯ ಮತದಾನ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...