alex Certify ಮದುವೆ ಹೊತ್ತಲ್ಲೇ ಬೆಚ್ಚಿ ಬೀಳಿಸುವ ಘಟನೆ, ಗುಂಡಿಕ್ಕಿ ವಧು ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹೊತ್ತಲ್ಲೇ ಬೆಚ್ಚಿ ಬೀಳಿಸುವ ಘಟನೆ, ಗುಂಡಿಕ್ಕಿ ವಧು ಹತ್ಯೆ

ಮಥುರಾ: ಪ್ರೇಮ ಪ್ರಕರಣದ ಆರೋಪದ ಮೇಲೆ ಮದುವೆ ಸಮಾರಂಭದಲ್ಲಿ ವಧುವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮಥುರಾದ ಮುಬಾರಕ್‌ ಪುರ ಗ್ರಾಮದಲ್ಲಿ 20 ವರ್ಷದ ಯುವತಿಯನ್ನು ಮದುವೆ ಸಮಾರಂಭದ ವೇಳೆ ಗುಂಡು ಹಾರಿಸಿ ಹತ್ಯೆಗೈದಿದ್ದು, ಘಟನೆಗೆ ಪ್ರೇಮ ಪ್ರಕರಣಕ್ಕೆ ಕಾರಣ ಎಂದು ಪೊಲೀಸರು ಳಿಸಿದ್ದಾರೆ.

ಗುರುವಾರ ತಡರಾತ್ರಿ ನಡೆದ ‘ವರ್ಮಲಾ’ ಸಮಾರಂಭದ ಬಳಿಕ ಮೂವರು ವರನೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದ ನಡೆಸಿದ್ದಾರೆ. ಬಳಿಕ ಮದುವೆ ಸ್ಥಳದಲ್ಲಿಯೇ ವಧು ಕಾಜಲ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇಬ್ಬರು ಸಹೋದರರಾದ ಅನೀಶ್ ಮತ್ತು ಕಪಿಲ್ ಮತ್ತು ಅದೇ ಗ್ರಾಮದ ಸಂಜು ಎಂಬ ಮೂರನೇ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಶ್ರೀಶ್ ಚಂದ್ರ ಹೇಳಿದ್ದಾರೆ.

ಅವರ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಕಾಜಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆ ನೋಯ್ಡಾದ ವೀರ್ ಪಾಲ್ ಎಂಬಾತನನ್ನು ಮದುವೆಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...