alex Certify ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಇಂಜಿನಿಯರಿಂಗ್ ಪ್ರವೇಶ ನಿಯಮ ಸಡಿಲ – ಬೇರೆ ವಿಭಾಗದವರಿಗೂ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಇಂಜಿನಿಯರಿಂಗ್ ಪ್ರವೇಶ ನಿಯಮ ಸಡಿಲ – ಬೇರೆ ವಿಭಾಗದವರಿಗೂ ಅವಕಾಶ

ನವದೆಹಲಿ: ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಇದ್ದ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಬೇರೆ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಇಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

14 ವಿಷಯಗಳ ಪಟ್ಟಿಯನ್ನು ಎಐಸಿಟಿಇ ಬಿಡುಗಡೆ ಮಾಡಿದೆ. 14 ವಿಷಯಗಳಲ್ಲಿ ಮೂರು ವಿಷಯಗಳಲ್ಲಿ ವ್ಯಾಸಂಗ ಮಾಡಿ ಕನಿಷ್ಠ 45 ರಷ್ಟು ಅಂಕ ಗಳಿಸಿದವರಿಗೆ ಇಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.

ಗಣಿತಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಜೀವಶಾಸ್ತ್ರ, ಇನ್ಫಾರ್ಮ್ಯಾಟಿಕ್ಸ್ ಪ್ರಾಕ್ಟೀಸ್, ಬಯೋಟೆಕ್ನಾಲಜಿ, ಟೆಕ್ನಿಕಲ್ ವೆಕೇಶನಲ್ ಸಬ್ಜೆಕ್ಟ್, ಇಂಜಿನಿಯರಿಂಗ್ ಗ್ರಾಫಿಕ್, ವ್ಯವಹಾರ ಅಧ್ಯಯನ, ಉದ್ಯಮಶೀಲತೆ ಸೇರಿದಂತೆ ವಿವಿಧ ವಿಷಯಗಳಲ್ಲಿ 3 ವಿಷಯ ಅಧ್ಯಯನ ಮಾಡಿದವರಿಗೆ ಇಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ ಇರುತ್ತದೆ. ಹೊಸ ನಿಯಮ ಜಾರಿ ಮಾಡಿ ಆದೇಶ ಹೊರಡಿಸಲಾಗಿದ್ದು 2021 – 22 ನೇ ಸಾಲಿನಿಂದಲೇ ಹೊಸ ನಿಯಮ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

2021 ರಿಂದ ಬಿಇ ಮತ್ತು ಬಿಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು 12 ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಕಡ್ಡಾಯಗೊಳಿಸಿಲ್ಲ. ಎಐಸಿಟಿಇ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಎಂಜಿನಿಯರಿಂಗ್ ಪ್ರವೇಶ ಅರ್ಹತಾ ಮಾನದಂಡಗಳನ್ನು ಬದಲಾವಣೆ ಮಾಡಲಾಗಿದೆ. 12 ನೇ ತರಗತಿಯಲ್ಲಿ 14 ಕೋರ್ಸ್ ಗಳಲ್ಲಿ 3 ವಿಷಯ ಅಧ್ಯಯನ ಮಾಡಿದವರಿಗೆ ಅವಕಾಶ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...