ಪಾನಿಪುರಿ, ಭೇಲ್ಪುರಿ, ಮಸಾಲಾಪುರಿ, ಈ ಚಾಟ್ಗಳ ಒಂದೊಂದು ಹೆಸರು ಕೇಳ್ತಿದ್ರೆನೆ ಬಾಯಲ್ಲಿ ನೀರು ಬಂದು ಬಿಡುತ್ತೆ. ಸಂಜೆ ಆದ್ರೆ ಸಾಕು ಚಾಟ್ ಅಂಗಡಿಗಳ ಮುಂದೆ ಜನ ಸಾಲು ಸಾಲಾಗಿ ನಿಂತು ಬಾಯಿ ಚಪ್ಪರಿಸಿಕೊಂಡು ತಿನ್ತಾ ಇರ್ತಾರೆ. ಈಗ ಇದೇ ಚಾಟ್ಗಳಲ್ಲಿ ಒಂದಾದ ಭೇಲ್ಪುರಿ ವಿದೇಶದಲ್ಲೂ ಫುಲ್ ಫೇಮಸ್ ಆಗಿದೆ.
ಅದು ಆಸ್ಟ್ರೇಲಿಯಾದ ಫೇಮಸ್ ಕಾರ್ಯಕ್ರಮ ಮಾಸ್ಟರ್ ಶೆಫ್. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸಾರಾ ಟೋಡ್ ಅನ್ನೋವರು ಭಾಗವಹಿಸಿದ್ದರು. ಅವರಿಗೆ ಅಲ್ಲಿ ಸಂಜೆ ವೇಳೆ ತಿನ್ನುವಂತಹ ವಿಶೇಷ ತಿಂಡಿ ತಯಾರಿಸುವುದಕ್ಕೆ ಸವಾಲು ಹಾಕಿದ್ದಾರೆ. ಆಗ ಸಾರಾ ಅವರು ಟೇಸ್ಟಿ ಹಾಗೂ ತುಂಬಾ ಸುಲಭವಾಗಿ ತಯಾರಿಸುವಂತ ಭೇಲ್ಪುರಿಯನ್ನ ತಯಾರಿಸಿದ್ಧಾರೆ. ಅದನ್ನ ಕೊನೆಗೆ ಅಲ್ಲಿನ ತೀರ್ಪುಗಾರರಿಗೆ ಟೇಸ್ಟ್ ನೋಡುವುದಕ್ಕೆ ಕೊಟ್ಟಿದ್ದಾರೆ. ಒಂದೆರಡು ಸ್ಪೂನ್ ಭೇಲ್ಪುರಿ ತಿಂದಿದ್ದೇ ತಿಂದಿದ್ದು, ಅಲ್ಲಿನ ಜಡ್ಜಸ್ ಫುಲ್ ಖುಷ್ ಆಗಿ ಹೋಗಿದ್ದಾರೆ. ಈಗ ಈ ಸ್ಪೆಷಲ್ ಚಾಟ್ ಭೇಲ್ಪುರಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಆಸ್ಟ್ರೇಲಿಯಾದಲ್ಲಿ ಪ್ರಸಾರವಾಗುತ್ತಿರೋ ಮಾಸ್ಟರ್ ಶೆಫ್ 16ನೇ ಸರಣಿಯ ಕಾರ್ಯಕ್ರಮವಾಗಿದೆ. ಇದರಲ್ಲಿ ಭಾಗವಹಿಸಿದ್ದ ಓರ್ವ ಭಾರತೀಯ ಸ್ಪರ್ಧಿ ಹಾಗೂ ಸೆಲೆಬ್ರಿಟಿ ಶೆಫ್ ಸಾರಾ ಇವರಿಬ್ಬರು ಸೇರಿ ಈ ಸ್ವಾದಿಷ್ಟ ಭೇಲ್ಪುರಿಯನ್ನ ತಯಾರಿಸಿದ್ದರು. ಭಾರತೀಯ ಭಿನ್ನ ಭಿನ್ನವಾಗಿರೋ ವ್ಯಂಜನಗಳನ್ನ ಇಲ್ಲಿ ಭಾಗವಹಿಸಿದ್ದ ಭಾರತೀಯ ಸ್ಪರ್ಧಿಯ ಪ್ರಯತ್ನವಾಗಿತ್ತು. ಅದೇ ಉದ್ದೇಶ ಇಟ್ಟುಕೊಂಡು ತಯಾರಿಸಲಾಗಿದ್ದ ಭೇಲ್ಪುರಿ ಅಲ್ಲಿದ್ದವರ ಬಾಯಲ್ಲಿ ನೀರೂರಿಸಿ ಬಿಟ್ಟಿತ್ತು. ಸಾರಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯವನ್ನ ಹಂಚಿಕೊಂಡಿದ್ದಾರೆ. 10 ನಿಮಿಷ ಸ್ವಾದಿಷ್ಟ ವ್ಯಂಜನ ತಯಾರಿಸುವ ಸವಾಲು ಕೊಟ್ಟಾಗ ನನ್ನ ತಲೆಯಲ್ಲಿ ಮೊದಲಿಗೆ ಬಂದಿದ್ದೇ ಈ ಭೇಲ್ಪುರಿ. ಅಂತ ತಾವು ಇನ್ಸ್ಟಾಗ್ರಾಮ್ ಹಾಕಿಕೊಂಡಿರೋ ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಜಾವೇದ್ ಪುತ್ರಿಯನ್ನು ಬೆಂಬಲಿಸಿ ಜೆ.ಎನ್.ಯು. ನಲ್ಲಿ ಪ್ರತಿಭಟನೆ
ಈ ಸುತ್ತಿನಲ್ಲಿ ಭೇಲ್ಪುರಿಯೇ ತಯಾರಿಸುವುದಕ್ಕೆ ಕಾರಣ ಏನು ಅನ್ನೋದನ್ನ ಅವರು ಪೋಸ್ಟ್ಲ್ಲಿ ಹೇಳಿಕೊಂಡಿದ್ದಾರೆ. ಫಫ್ಡ್ ರೈಸ್ (ಕಡ್ಲೆಪುರಿ ಅಥವಾ ಚುರುಮರಿ) ಇದನ್ನ ಮೊದಲು ನೆನಸಿ ಕೊನೆಗೆ ಭೇಲ್ಪುರಿಯನ್ನ ತಯಾರಿಸಲಾಗುತ್ತೆ. ಆದರೆ ನಾವು ಇಲ್ಲಿ ಆ ರೀತಿ ಮಾಡದೇ ಸ್ವಾದವೂ ಕಡಿಮೆ ಆಗದಂತೆ ನೋಡಿಕೊಂಡು ಭೇಲ್ಪುರಿಯನ್ನ 10 ನಿಮಿಷದಲ್ಲಿ ತಯಾರಿಸಿದ್ದೇವೆ.
ಕೊಂಚ ಹುಳಿ, ಮಸಾಲೆ ಹಾಕಿ, ಚೂರೇ ಚೂರು ಖಾರ ಹಾಕಿ ನಾವು ಕ್ರಿಸ್ಪಿಯಾಗಿ ಭೇಲ್ಪುರಿಯನ್ನ ಸಿದ್ಧಪಡಿಸಿದ್ದೇವೆ. ಇದು ಸುಲಭವಾಗಿ ತಯಾರಿಸಬಹುದಾದರೂ, ಆಸ್ಟ್ರೇಲಿಯನ್ರಿಗೆ ಅಷ್ಟು ಇಷ್ಟವಾಗುವುದಿಲ್ಲ. ಇದಕ್ಕೆ ಕಾರಣ ಭಾರತೀಯರಿಗಿಂತ ಭಿನ್ನವಾಗಿರೋ ಅವರ ಆಹಾರ ಪದ್ಧತಿ.
ಸೋಶಿಯಲ್ ಮೀಡಿಯಾದಲ್ಲಿ ಈ ಭೇಲ್ಪುರಿ ಈಗ ಫುಲ್ ವೈರಲ್ ಆಗ್ತಿದೆ. ಆದರೆ ಆಸ್ಟ್ರೇಲಿಯನ್ನರು ಈ ಭೇಲ್ಪುರಿ ಕುರಿತು ತಮಾಷೆ ಮಾಡುತ್ತಿದ್ದಾರೆ. ಒಬ್ಬರಂತೂ ವಿಶ್ವಮಟ್ಟದಲ್ಲಿ ಫೇಮಸ್ ಆಗಿರೋ ಮಾಸ್ಟರ್ ಶೆಫ್ಲ್ಲಿ20 ರೂಪಾಯಿ ಭೇಲ್ಪುರಿ ಮಾಡ್ತಿದ್ದಾರೆ. ನಿಜಕ್ಕೂ ಇದು ಆಶ್ಚರ್ಯ ಎಂದಿದ್ದಾರೆ.
https://twitter.com/navdhad/status/1526272534916001792?ref_src=twsrc%5Etfw%7Ctwcamp%5Etweetembed%7Ctwterm%5E1526272534916001792%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmasterchef-australia-contestant-serves-bhel-puri-to-the-judges-desi-netizens-in-splits-1961523-2022-06-12