ಬಹಳ ಕಾಲ ನೆನೆಪಿನಲ್ಲಿ ಉಳಿಯುವ ಶೋಧವೊಂದು ಬ್ರಿಟನ್‌ನ ಕಡಲ ತೀರದಲ್ಲಿ ಕಂಡು ಬಂದಿದೆ. ಲೀಸೆಸ್ಟರ್‌ಶೈರ್ ಮತ್ತು ರಟ್ಲಾಂಡ್ ವನ್ಯಜೀವಿ ಟ್ರಸ್ಟ್ ಈ ಸಂಶೋಧನೆ ಮಾಡಿದೆ.
32-ಅಡಿ ಉದ್ದವಿರುವ ಈ ’ಸಮುದ್ರ ಡ್ರ‍್ಯಾಗನ್’ ಪಳೆಯುಳಿಕೆ ಇಲ್ಲಿನ ಮಿಡ್ಲಾಂಡ್ಸ್ ತೀರದಲ್ಲಿ ಕಂಡು ಬಂದಿದೆ. ಬ್ರಿಟನ್‌ನಲ್ಲಿ ಇದುವರೆಗೂ ಕಂಡುಬಂದಿರುವ ಅತ್ಯಂತ ದೊಡ್ಡ ಹಾಗೂ ಪರಿಪೂರ್ಣ ಪಳೆಯುಳಿಕೆ ಇದಾಗಿದೆ ಎಂದು ನಂಬಲಾಗಿದೆ.
ಜಾರ್ಖಂಡ್: ಜುರಾಸಿಕ್ ಕಾಲದ ಪಳೆಯುಳಿಕೆ ಪತ್ತೆ
ಫೆಬ್ರವರಿ 2021ರಲ್ಲಿ ಪತ್ತೆಯಾದ ಈ ಪಳೆಯುಳಿಕೆಯನ್ನು ಪೂರ್ಣವಾಗಿ ಅಗೆಯಲು ಸೆಪ್ಟೆಂಬರ್‌ವರೆಗೂ ಸಮಯ ತಗುಲಿದೆ.
ಇಚ್ತೋಯಾಸರ್‌ಗಳು ಎನ್ನಲಾಗುವ ಈ ಜೀವಿಗಳು ಮೂಲತಃ ಸಮುದ್ರ ಡ್ರ‍್ಯಾಗನ್‌ಗಳಾಗಿವೆ. ಅವುಗಳ ದೊಡ್ಡ ಹಲ್ಲುಗಳು ಮತ್ತು ಕಣ್ಣುಗಳು ಇದಕ್ಕೆ ಕಾರಣ. ಈ ಪಳೆಯುಳಿಕೆಯನ್ನು ಇತ್ತೀಚೆಗೆ ಪತ್ತೆ ಮಾಡಿದ್ದಾದರೂ ಸಹ ಇವುಗಳಲ್ಲಿ ಮೊದಲನೆಯದ್ದನ್ನು ಪ್ರಾಗ್ಜೀವಶಾಸ್ತ್ರಜ್ಞೆ ಮೇರಿ ಅನ್ನಿಂಗ್ 19ನೇ ಶತಮಾನದ ಆರಂಭದಲ್ಲಿ ಪತ್ತೆ ಮಾಡಿದ್ದರು.
ಮೆಸೋಜ಼ೋಯಿಕ್ ಕಾಲಮಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಇಚ್ತೋಯಾಸರ್‌ಗಳು 250 ವರ್ಷಗಳ ಹಿಂದೆ ಮೊದಲ ಬಾರಿಗೆ ಪತ್ತೆಯಾಗಿದ್ದವು. 90 ದಶಲಕ್ಷ ವರ್ಷಗಳ ಹಿಂದೆ ಇವುಗಳ ಪೈಕಿ ಕೊನೆಯದ್ದು ಬದುಕಿತ್ತು ಎನ್ನಲಾಗಿದೆ.