ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(LIC)ದಲ್ಲಿ ನೌಕರರ ವೇತನವನ್ನು ಶೇಕಡ 25 ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಾರದಲ್ಲಿ 5 ದಿನ ಮಾತ್ರ ಕೆಲಸದ ದಿನವೆಂದು ನಿಗದಿ ಮಾಡಲಾಗಿದೆ.
ವಾರದಲ್ಲಿ 6 ದಿನದ ಬದಲು ಇನ್ನುಮುಂದೆ 5 ದಿನ ಕೆಲಸ ದಿನ ಇರಲಿದೆ. ನಿಗಮದ 1.14 ಲಕ್ಷ ಉದ್ಯೋಗಿಗಳಿಗೆ ಶೇಕಡ 25 ರಷ್ಟು ವೇತನ ಹೆಚ್ಚಳ ಮಾಡಲಾಗುವುದು. ಕೇಂದ್ರ ಸರ್ಕಾರ ಎಲ್ಐಸಿ ಉದ್ಯೋಗಿಗಳ ವೇತನ ಶ್ರೇಣಿ ಪರಿಷ್ಕರಿಸಿದೆ. 2017ರ ಆಗಸ್ಟ್ 1 ರಿಂದ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳ ಮಾಡಲಾಗುವುದು. ನಿಗಮದ ಎಲ್ಲಾ ನೌಕರರಿಗೆ ಶ್ರೇಣಿಗೆ ತಕ್ಕಂತೆಯೂ ವಿಶೇಷ ಭತ್ಯೆ ಕೂಡ ನೀಡಲಾಗುವುದು.