ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ತಾಲಿಬಾನ್ ನಾಯಕರನ್ನು ಭೇಟಿಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಬೆಂಬಲ ನೀಡುವಂತೆ ಕೋರಿದ್ದಾನೆ ಎಂದು ತಿಳಿದುಬಂದಿದೆ.
ವರದಿಯ ಪ್ರಕಾರ ಕಳೆದ ವಾರ ಕಂದಹಾರ್ನಲ್ಲಿ ಮಸೂದ್ ಅಝರ್ ತಾಲಿಬಾನ್ ಹಿರಿಯ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಸೇರಿದಂತೆ ಅನೇಕರನ್ನು ಭೇಟಿಯಾಗಿದ್ದಾನೆ.
ಅಝರ್ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಿಸಲು ತಾಲಿಬಾನಿಗಳ ನೆರವು ಕೋರಿದ್ದಾನೆ ಎನ್ನಲಾಗಿದೆ.
BIG BREAKING: ತಾಕತ್ ತೋರಿಸಿದ ದೊಡ್ಡಣ್ಣ -36 ಗಂಟೆಯಲ್ಲೇ ಉಗ್ರರ ವಿರುದ್ಧ ಸೇಡು -ಐಸಿಸ್ ಮೇಲೆ ಏರ್ ಸ್ಟ್ರೈಕ್
ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಕೆಡವಿ ಆಗಸ್ಟ್ 15ರಂದು ಪಾರುಪತ್ಯ ಸಾಧಿಸಿದ ತಾಲಿಬಾನಿಗಳ ಕ್ರಮವನ್ನು ಅಝರ್ ಪ್ರಶಂಸಿಸಿದ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಆಗಸ್ಟ್ 16ರಂದು ‘ಮಂಜಿಲ್ ಕಿ ತಾರಿಫ್ (ಗುರಿಯೆಡೆಗೆ ಸಾಗಿದ್ದಕ್ಕೆ ಪ್ರಶಂಸೆ) ಎಂಬ ಶೀರ್ಷಿಕೆಯ ಅಡಿಯಲ್ಲಿ ಜೆಎಂಇ ಮುಖ್ಯಸ್ಥ ಅಫ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್ ಯಶಸ್ಸನ್ನು ಕೊಂಡಾಡಿದ್ದ.