ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ 6.58 ಲಕ್ಷ ರೂ (ಎಕ್ಸ್ ಶೋ ರೂಂ).
ಹೊಸ CNG ರೂಪಾಂತರವು ಭಾರತದಲ್ಲಿ ಬೆಳೆಯುತ್ತಿರುವ ಬ್ರಾಂಡ್‌ನ ಗ್ರೀನ್ ವೆಹಿಕಲ್ ಪೋರ್ಟ್‌ಫೋಲಿಯೊದ ಭಾಗವಾಗಿದೆ. ಈ ಹೊಸ ಸೆಲೆರಿಯೊ 60 ಲೀಟರ್ (ನೀರು ತುಂಬುವ ಸಾಮರ್ಥ್ಯ) CNG ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 35.60 km/kg ಮೈಲೇಜ್ ನೀಡುತ್ತದೆ.
ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ
ಸೆಲೆರಿಯೊದ ಈ ಹಿಂದಿನ ಆವೃತ್ತಿಯನ್ನು ನವೆಂಬರ್’21 ರಲ್ಲಿ ಪೆಟ್ರೋಲ್ ಅವತಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಎರಡೇ ತಿಂಗಳಲ್ಲಿ ಸುಮಾರು 25,000 ಯುನಿಟ್ ಗಳ ಬುಕಿಂಗ್ ಆಗಿದೆ ಎಂದು ವರದಿಯಾಗಿದೆ. ಸೆಲೆರಿಯೊ ಭಾರತದ ಅತ್ಯಂತ ಇಂಧನ ದಕ್ಷತೆಯ ಪೆಟ್ರೋಲ್ ವಾಹನವಾಗಿದ್ದು, 26.68 kmpl ಮೈಲೇಜ್ ನೀಡುತ್ತದೆ. ಸೆಲೆರಿಯೊ ಆರಂಭಿಕ ಬೆಲೆ ರೂ 4.99 ಲಕ್ಷ (ಎಕ್ಸ್ ಶೋ ರೂಂ). ಮಾರುತಿ ಸುಜುಕಿ ಸೆಲೆರಿಯೊ 7 ರೂಪಾಂತರಗಳಲ್ಲಿ ಲಭ್ಯವಿದೆ, ಇಂದು ಬಿಡುಗಡೆಯಾಗಿರುವ S-CNG ಇದರ 8 ನೇ ವೇರಿಯಂಟ್ ಆಗಿದೆ.
ಮಾರುತಿ ಸುಜುಕಿ ಫ್ಯಾಕ್ಟರಿ ಅಳವಡಿಸಿರುವ ಎಸ್-ಸಿಎನ್‌ಜಿ ವಾಹನಗಳು ಡ್ಯುಯಲ್ ಇಂಟರ್ ಡಿಪೆಂಡೆಂಟ್ ಇಸಿಯುಗಳು (ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್‌ಗಳು) ಮತ್ತು ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಮ್‌ಗಳನ್ನು ಹೊಂದಿವೆ. ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ವರ್ಧಿತ ಡ್ರೈವಿಂಗ್ ಎಬಿಲಿಟಿ ನೀಡಲು ವಾಹನಗಳನ್ನು ವಿಶೇಷವಾಗಿ ಟ್ಯೂನ್ ಮಾಡಲಾಗಿದೆ.