alex Certify Shocking: ಯಾತ್ರೆಗೆಂದು ತೆರಳಿ ಪಾಕ್‌ ವ್ಯಕ್ತಿಯನ್ನು ಮದುವೆಯಾದ ವಿವಾಹಿತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಯಾತ್ರೆಗೆಂದು ತೆರಳಿ ಪಾಕ್‌ ವ್ಯಕ್ತಿಯನ್ನು ಮದುವೆಯಾದ ವಿವಾಹಿತೆ…!

ಸಿಖ್ಖರ ಮೊದಲ ಗುರು ಗುರುನಾನಕ್​​ರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಸಿಖ್​ ಜಾಥಾದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದ ಕೋಲ್ಕತ್ತಾ ಮೂಲದ ವಿವಾಹಿತೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಲಾಹೋರ್​ ಮೂಲದ ವ್ಯಕ್ತಿಯನ್ನು ವಿವಾಹವಾದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಲಾಹೋರ್​​ ಮೂಲದ ವ್ಯಕ್ತಿ ಮೊಹಮ್ಮದ್​ ಇಮ್ರಾನ್​​ರನ್ನು ಮದುವೆಯಾದ ಹೊರತಾಗಿಯೂ ಕೋಲ್ಕತ್ತಾದ ಮಹಿಳೆಗೆ ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಶುಕ್ರವಾರ ಮಹಿಳೆಯು ವಾಘಾ – ಅಟ್ಟಾರಿ ಅಂತಾರಾಷ್ಟ್ರೀಯ ಸಿಖ್​ ಜಾಥಾ ಹಿಂದಿರುಗುವ ವೇಳೆ ಭಾರತಕ್ಕೆ ಮರಳಿದ್ದಾಳೆ.

ಇನ್ನೊಂದು ವಿಶೇಷ ಅಂದರೆ ರಂಜಿತ್​​ ಕೌರ್​​ (ಹೆಸರು ಬದಲಾಯಿಸಲಾಗಿದೆ) ಹಾಗೂ ಆಕೆಯ ಪತಿ ಪರಮ್​ದೀಪ್​ ಸಿಂಗ್​( ಹೆಸರು ಬದಲಾಯಿಸಲಾಗಿದೆ) ಕಿವುಡು ಹಾಗೂ ಮೂಗರಾಗಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಮೊಹಮ್ಮದ್​ ಇಮ್ರಾನ್​ ಕೂಡ ಮೂಕ ಹಾಗೂ ಕಿವುಡನಾಗಿದ್ದಾನೆ.

ಮೊಹಮ್ಮದ್​ ಇಮ್ರಾನ್​ ಜೊತೆಯಲ್ಲಿ ರಂಜಿತಾ ಕೌರ್​ ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ಆಕೆಯ ಪತಿ ಪರಂದೀಪ್​ಗೆ ಸಹ ತಿಳಿದಿತ್ತು. ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ವೇಳೆ ರಂಜಿತಾ ತನ್ನ ಹೆಸರು ಪರ್ವೀನಾ ಸುಲ್ತಾನಾ ಎಂದು ಮರುನಾಮಕರಣ ಮಾಡಿಕೊಂಡಿದ್ದಳು.

ಅಲ್ಲದೇ ತನ್ನ ಸಿಖ್​ ಧರ್ಮದ ಪತಿಯ ಸಮ್ಮುಖದಲ್ಲಿಯೇ ಮೊಹಮ್ಮದ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು ಎನ್ನಲಾಗಿದೆ. ಮೊಹಮ್ಮದ್​ ಇಮ್ರಾನ್​ ರಾಜನ್​ಪುರ್​ ನಿವಾಸಿಯಾಗಿದ್ದಾನೆ.

ನವೆಂಬರ್​ 23ರಂದು ರಂಜಿತ್​ ಕೌರ್​​ ಹಾಗೂ ಇಮ್ರಾನ್ ಲಾಹೋರ್​ನಲ್ಲಿ ನಿಖಾ ಮಾಡಿಕೊಂಡಿದ್ದಾರೆ. ಇದಾದ ಬಳಿಕ ರಂಜಿತ್​ ಕೌರ್​ ತನ್ನ ಸಿಖ್​ ಧರ್ಮದ ಪತಿಗೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ವಿಚ್ಛೇದನ ನೀಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಸಂಜೆ ಪಾಕಿಸ್ತಾನದಿಂದ ವಾಘಾ-ಅಟ್ಟಾರಿಗೆ ರಂಜಿತಾ ಕೌರ್​​ ವಾಪಸ್ಸಾಗಿದ್ದಾಳೆ. ಆಕೆ ಇಸ್ಲಾಂ ಧರ್ಮ ಸ್ವೀಕರಿಸಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ವಿಚಾರ ದೃಢವಾಗಿದೆ. ಆದರೆ ಪಾಕ್​ನ ಅಧಿಕಾರಿಗಳು ಆಕೆ ಲಾಹೋರ್​ನಲ್ಲಿ ನೆಲೆಸಲು ನಿರಾಕರಿಸಿದ್ದಾರೆ. ಆಕೆ ಯಾತ್ರೆಯ ಉದ್ದೇಶದಿಂದ ಪಾಕ್​ಗೆ ಬಂದ ಹಿನ್ನೆಲೆಯಲ್ಲಿ ಶಾಶ್ವತವಾಗಿ ಪಾಕ್​ನಲ್ಲಿ ನೆಲೆಸಲು ಸಾಧ್ಯವಿಲ್ಲ. ಪಾಕಿಸ್ತಾನ ವೀಸಾಗಾಗಿ ಆಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...