alex Certify ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತ ಬಳಿಕ ವೈರಲ್‌ ಆಗಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತ ಬಳಿಕ ವೈರಲ್‌ ಆಗಿದೆ ಈ ವಿಡಿಯೋ

ಪಾಕಿಸ್ತಾನವು ಭಾರತದಿಂದ ಹೀನಾಯ ಸೋಲು ಅನುಭವಿಸಿದ ಬಳಿಕ ‘ಓ ಭಾಯಿ ಮಾರೋ ಮುಝೆ ಮಾರೋ’ ಎಂಬ ವಿಡಿಯೋ ಭಾರಿ ವೈರಲ್​ ಆಗಿತ್ತು. ಕ್ರಿಕೆಟ್​ ಅಭಿಮಾನಿಯೊಬ್ಬ ತನ್ನನ್ನು ಸಾಯಿಸಿ ಎಂದು ನಾಟಕವಾಡಿದ ಈ ವಿಡಿಯೋದಿಂದಾಗಿ ರಾತ್ರೋರಾತ್ರಿ ಆತ ಸ್ಟಾರ್ ಆಗಿಬಿಟ್ಟಿದ್ದ. ಇದನ್ನೇ ಹಲವರು ನಟಿಸಿ ಹಲವು ರೀತಿಯ ಮೀಮ್​ಗಳನ್ನೂ ಮಾಡಿದ್ದರು.

ಇದೀಗ ಅಂಥದ್ದೇ ವಿಡಿಯೋ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತ ಬಳಿಕ ಅಭಿಮಾನಿಯೊಬ್ಬ ಇದೇ ಡೈಲಾಗ್​ ಹೇಳುತ್ತಿದ್ದು, ಆತನನ್ನು ಇನ್ನೋರ್ವ ಭಾರತೀಯ ಅಭಿಮಾನಿ ಉಳಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದೆ.

ಇಂಥದ್ದೊಂದು ನಟನೆ ಮಾಡಿದ್ದು ಯೂಟ್ಯೂಬರ್ ಗೌರವ್ ತನೇಜಾ. ಭಾರತ ಸೋತ ಬಳಿಕ ಅವರು ಸಾಯುವಂತೆ ನಟಿಸಿದರು. ಇನ್ನೊಬ್ಬ ಯೂಟ್ಯೂಬರ್​ ಮೋಮಿನ್ ಸಾಕಿಬ್ ಅವರು ಗೌರವ್​ ಅವರನ್ನು ಉಳಿಸಲು ಹೋಗುವಂತೆ ನಾಟಕವಾಡಿದ್ದು, ಈ ವಿಡಿಯೋ ಇದಾಗಲೇ ಐದು ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋತ ನಂತರ ಮೋಮಿನ್ ಮತ್ತು ಗೌರವ್ ಅಳುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಗೌರವ್ ಮೂರ್ಛೆಹೋಗುವಂತೆ ನಟಿಸುತ್ತಾರೆ ಮತ್ತು ಮೋಮಿನ್​ ಅವರನ್ನು ಉಳಿಸುವಂತೆ ನಟಿಸಿರುವ ವಿಡಿಯೋ ಇದಾಗಿದೆ. ಈ ವಿಡಿಯೋಗೆ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...