alex Certify Market Wrap: ದಿನದ ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Market Wrap: ದಿನದ ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್

ಅಮೆರಿಕಾದಲ್ಲಿ  ಹಣದುಬ್ಬರದ ಏರಿಕೆಯಿಂದಾಗಿ ಅಂತರಾಷ್ಟ್ರೀಯ ಷೇರು  ಮಾರುಕಟ್ಟೆಗಳು ಕುಸಿತಗೊಂಡಿದ್ದು,  ಇದು ಭಾರತೀಯ ಷೇರು ಮಾರುಕಟ್ಟೆಯಲ್ಲೂ ಪರಿಣಾಮ ಬೀರಿತ್ತು. ಸೆನ್ಸೆಕ್ಸ್ ದಿನದ ಕನಿಷ್ಠ 59,417.12 ರಲ್ಲಿ 1,154 ಅಂಕಗಳ ಬೃಹತ್ ಕಡಿತದೊಂದಿಗೆ ಪ್ರಾರಂಭವಾಗಿದ್ದು, ದಿನದ ಕೊನೆಯಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕವು ಅಂತಿಮವಾಗಿ 224 ಪಾಯಿಂಟ್‌ಗಳನ್ನು ಅಥವಾ 0.37% ರಷ್ಟು ಕಡಿಮೆಯಾಗಿ 60,346.97 ಕ್ಕೆ ಮುಟ್ಟಿತು. ನಿಫ್ಟಿ 18,000 ಮಾರ್ಕ್ ಅನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿದ್ದು, ದಿನದ ಕೊನೆಯಲ್ಲಿ 66 ಪಾಯಿಂಟ್‌ಗಳು ಅಥವಾ 0.37% ನಷ್ಟು ಇಳಿಕೆಯಾಗಿ 18,003.75 ಕ್ಕೆ ಮುಕ್ತಾಯವಾಗಿದೆ.

ದೇಶೀಯ ಮಾರುಕಟ್ಟೆಯ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿನ ತೀವ್ರ ಮಾರಾಟವನ್ನು ಪ್ರತಿಬಿಂಬಿಸಿದರೂ, ಹೂಡಿಕೆದಾರರು ಇದನ್ನು ಬಳಸಿಕೊಂಡು ಷೇರು ಖರೀದಿಸಿದ್ದಾರೆ. ಇದರಿಂದಾಗಿ ಅದು ಸ್ಥಿರವಾಗಿ ಚೇತರಿಸಿಕೊಂಡಿದೆ ಎಂದು ಸಂಶೋಧನಾ ಮುಖ್ಯಸ್ಥ ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ ನ ವಿನೋದ್ ನಾಯರ್ ಹೇಳಿದ್ದಾರೆ.

ಇಂಡಸ್‌ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಪವರ್ ಗ್ರಿಡ್ ಮತ್ತು ಎಸ್‌ಬಿಐ ಷೇರುಗಳು ಟಾಪ್ ಗೇನರ್‌ಗಳಾಗಿ ಕೊನೆಗೊಂಡರೆ, ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ ಮತ್ತು ಎಚ್‌ಸಿಎಲ್ ಟೆಕ್ ಷೇರುಗಳು ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಟಾಪ್‌ ಲೂಸರ್ಸ್‌ ಆಗಿ ಕೊನೆಗೊಂಡವು.

ವಲಯವಾರು ಸೂಚ್ಯಂಕಗಳಲ್ಲಿ, BSE IT 3.28% ನಷ್ಟು ಕಳೆದುಕೊಂಡು ಟಾಪ್ ಲೂಸರ್ ಆಗಿ ಕೊನೆಗೊಂಡಿತು, ನಂತರ BSE Teck 2.85% ನಷ್ಟು ಕಡಿತದೊಂದಿಗೆ ಸ್ಥಿರವಾಗಿದೆ.

ಬಿಎಸ್‌ಇ ತೈಲ ಮತ್ತು ಅನಿಲ (0.90% ಇಳಿಕೆ), ಕ್ಯಾಪಿಟಲ್ ಗೂಡ್ಸ್ (0.83% ಇಳಿಕೆ) ಮತ್ತು ಎನರ್ಜಿ (0.76% ಇಳಿಕೆ) ಸಹ ಕೆಂಪು ಬಣ್ಣದಲ್ಲಿ ಕೊನೆಗೊಂಡಿತು.

ಮತ್ತೊಂದೆಡೆ, ಲೋಹದ ಸೂಚ್ಯಂಕವು 1.91% ಏರಿಕೆಯಾಗಿದೆ. ಬಿಎಸ್‌ಇ ಬ್ಯಾಂಕೆಕ್ಸ್ (1.28% ಏರಿಕೆ), ಬೇಸಿಕ್ ಮೆಟೀರಿಯಲ್ಸ್ (1.18% ಏರಿಕೆ) ಮತ್ತು ಫೈನಾನ್ಸ್ (0.93% ಏರಿಕೆ) ಸಹ ಯೋಗ್ಯವಾದ ಲಾಭವನ್ನು ಗಳಿಸಿವೆ.

ಕಚ್ಚಾ ತೈಲ ದರ ಒಂದು ಬ್ಯಾರೆಲ್ ಮಾರ್ಕ್ $ 95 ಕ್ಕಿಂತ ಕಡಿಮೆಗೆ ವ್ಯಾಪಾರವಾಗಿದ್ದು, ರೂಪಾಯಿ ಮೌಲ್ಯ 29 ಪೈಸೆಯಷ್ಟು ಕುಸಿದು ಪ್ರತಿ ಡಾಲರ್‌ಗೆ 79.44 ಕ್ಕೆ ತಲುಪಿದೆ.

ಮಾರುಕಟ್ಟೆಯಲ್ಲಿನ ದೌರ್ಬಲ್ಯದ ಹೊರತಾಗಿಯೂ, ಐಸಿಐಸಿಐ ಬ್ಯಾಂಕ್, ಐಟಿಸಿ, ಎನ್‌ಟಿಪಿಸಿ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಫೋರ್ಟಿಸ್ ಹೆಲ್ತ್‌ಕೇರ್ ಮತ್ತು ಬಜಾಜ್ ಹೋಲ್ಡಿಂಗ್ಸ್ ಮತ್ತು ಇನ್ವೆಸ್ಟ್‌ಮೆಂಟ್ ಸೇರಿದಂತೆ 217 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...