ನಾವೆಲ್ಲಾ ಚಿಕ್ಕವರಿರುವಾಗ ನೀತಿಪಾಠ ಎಂದು ವಿಷಯವಿತ್ತು. ದಿನವೂ ಮಕ್ಕಳಿಗೆ ಅಂದು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಬರೆಯಲು ಹೇಳಲಾಗುತ್ತಿತ್ತು. ಆದರೆ ಇಂದು ಅವೆಲ್ಲಾ ಮರೆಯಲಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ 30 ವರ್ಷ ತುಂಬುವ ಮೊದಲು 30 ಸೇವಾ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ಜಗತ್ತನ್ನು ಉತ್ತಮ ಸ್ಥಳವಾಗಿಸಲು ನಿರ್ಧರಿಸಿದ್ದು ಈತನ ವಿಷಯವೀಗ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.
ಬ್ರಿಯಾನ್ ಸಿಲಿಯಾಕೋಸ್ 29 ವರ್ಷ ವಯಸ್ಸಿನವನಾಗಿದ್ದಾಗ, ಪ್ರಜ್ಞಾಪೂರ್ವಕವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾನೆ. ಇಲ್ಲಿಯವರೆಗಿನ ಜೀವನದಲ್ಲಿ ತಾನು ಮಾಡಿರುವ ಸೇವಾ ಕಾರ್ಯಗಳನ್ನು ಬರೆಯಲು ಆರಂಭಿಸಿರುವ ಬ್ರಿಯಾನ್, ತನಗೆ 30 ವರ್ಷ ತುಂಬುವುದರೊಳಗೆ 30 ಸೇವಾ ಕೈಂಕರ್ಯ ಮಾಡಲು ನಿರ್ಧರಿಸಿದ್ದಾನೆ.
“ನಾನು ಕಾಗದದ ಹಾಳೆಯನ್ನು ಹೊರತೆಗೆದಿದ್ದೇನೆ ಮತ್ತು ನಾನು ಕೃತಜ್ಞರಾಗಿರುವ ಎಲ್ಲ ವಿಷಯಗಳನ್ನು ಬರೆಯಲು ಪ್ರಾರಂಭಿಸಿದೆ. ಮತ್ತು ಆ ಕ್ಷಣದಲ್ಲಿ, ನನ್ನ ಜೀವನದಲ್ಲಿ ಘಟಿಸಿರುವ ಅದ್ಭುತ ಸಂಗತಿಯನ್ನು ದಾಖಲಿಸಿದ್ದೇನೆ. 30 ವರ್ಷ ತುಂಬುವ ಮೊದಲು 30 ದಯೆಯ ಕಾರ್ಯಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ“ ಎಂದಿದ್ದಾನೆ ಬ್ರಿಯಾಲ್.
ಬ್ರಿಯಾನ್ ತನ್ನ ಸಂಪೂರ್ಣ ಪ್ರಯಾಣವನ್ನು ಇನ್ಸ್ಟಾಗ್ರಾಂನಲ್ಲಿ ದಾಖಲಿಸಿದ್ದಾನೆ. ಇದರಲ್ಲಿ ಬ್ರಿಯಾನ್ ಸ್ಯಾನ್ ಜೋಸ್‌ನಲ್ಲಿ ಅಗ್ನಿಶಾಮಕ ದಳದವರಿಗೆ 400 ಕ್ಕೂ ಹೆಚ್ಚು ಸಿಹಿತಿಂಡಿಗಳನ್ನು ತಯಾರಿಸಿರುವುದರೊಂದಿಗೆ ಸೇವಾ ಕಾರ್ಯ ಪ್ರಾರಂಭವಾಗಿರುವ ಬಗ್ಗೆ ಬರೆದುಕೊಂಡಿದ್ದಾರೆ.