ಅಪಾರ್ಟ್ಮೆಂಟ್ನಲ್ಲಿ ಇರಲು ಜೊತೆಗಾರರನ್ನು ಹುಡುಕಲು ಹಲವಾರು ದಾರಿಗಳಿವೆ, ಆದರೆ ಇಲ್ಲೊಬ್ಬ ಮಹಾಶಯ ಪ್ರಮುಖ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಫ್ಲಾಟ್ಮೇಟ್ ಪ್ಲೇಕಾರ್ಡ್ ಹಿಡಿದು ಗಮನ ಸೆಳೆದಿದ್ದಾನೆ.
ಫ್ಲಾಟ್ಮೇಟ್ಗಾಗಿ ತೀವ್ರವಾಗಿ ಹುಡುಕುತ್ತಿರುವ ವ್ಯಕ್ತಿ ಬೆಂಗಳೂರಿನಲ್ಲಿ ನಡೆದ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಜನಜಂಗುಳಿ ನಡುವೆ ಫ್ಲಾಟ್ಮೇಟ್ ಅಗತ್ಯವಿದೆ ಎಂದು ಬರೆದ ಫಲಕವನ್ನು ತೆಗೆದುಕೊಂಡು ಹೋಗಿದ್ದರು.
ಲಕ್ಕಿ ಅಲಿ ಅವರು ಪ್ರದರ್ಶನ ನೀಡಿದ ಸಂಗೀತ ಕಚೇರಿಯಲ್ಲಿ ಇದು ಸಂಭವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರವು ಕ್ರೇಜಿಯಾಗಿ ವೈರಲ್ ಆಗಿದೆ.
ಸಂಗೀತ ಕಾರ್ಯಕ್ರಮದಲ್ಲಿ ಸಮಯದಲ್ಲಿ ಪ್ಲೇಕಾರ್ಡ್ ಹಿಡಿದಿದ್ದ ವ್ಯಕ್ತಿಯ ಫೋಟೋವನ್ನು ತೆಗೆದವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಚಿತ್ರವನ್ನು ಟ್ವಿಟ್ಟರ್ ಬಳಕೆದಾರ ಶುಭ್ ಖಂಡೇಲ್ವಾಲ್ ಅಪ್ಲೋಡ್ ಮಾಡಿದ್ದು “ಲಕ್ಕಿ ಅಲಿ ಸಂಗೀತ ಕಚೇರಿಯಲ್ಲಿ ಇದು ಸಂಭವಿಸಿದೆ. ಬೆಂಗಳೂರಿನಲ್ಲಿ ವಸತಿ ಪರಿಸ್ಥಿತಿ ಕೆಟ್ಟದಾಗಿದೆ” ಎಂದು ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದರ ಬಗ್ಗೆ ಹಾಸ್ಯಮಯವಾಗಿ ಕಾಮೆಂಟ್ ಮಾಡಲು ನೆಟ್ಟಿಗರನ್ನು ಪ್ರಚೋದಿಸಿತು. ನೂರಾರು ಮಂದಿ ಕಾಮೆಂಟ್ ಮಾಡಿ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.