ಪುಣೆ: ಹಲವು ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಕೆಲವರಿಗೆ ಇದನ್ನು ಧರಿಸುವುದು ಎಂದರೆ ಅಸಡ್ಡೆ. ಆದರೆ ಪ್ರಾಣವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್ ಹೇಗೆ ಮುಖ್ಯ ಎಂಬ ಬಗ್ಗೆ ಪೊಲೀಸ್ ಇಲಾಖೆ ಅಗಾಗ್ಗೆ ಗಮನ ಸೆಳೆಯುತ್ತಿರುವುದು ಉಂಟು. ಆದರೂ ಕೆಲವರು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ.
ಈಗ ಹೆಲ್ಮೆಟ್ ಕುರಿತಾದ ಟ್ವಿಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಟ್ವಿಟರ್ ಬಳಕೆದಾರ ಮೆಲ್ವಿನ್ ಚೆರಿಯನ್ ಅವರು ಈ ಪೋಸ್ಟ್ ಶೇರ್ ಮಾಡಿದ್ದಾರೆ.
ಟ್ರಾಫಿಕ್ ಸಿಗ್ನಲ್‌ನಲ್ಲಿ ಹೆಲ್ಮೆಟ್ ಇಲ್ಲದೇ ನಿಂತಿರುವ ಫೋಟೋಗಳನ್ನು ಪೊಲೀಸ್ ಇಲಾಖೆ ಶೇರ್ ಮಾಡಿದೆ. ಪ್ರತಿ ಕ್ರಾಸಿಂಗ್‌ನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿದ ಚಿತ್ರವು ಹೆಲ್ಮೆಟ್ ಇಲ್ಲದ ಬೈಕ್ ಸವಾರನನ್ನು ತೋರಿಸುತ್ತಿದ್ದು, ಇದನ್ನು ಹಲವರು ಟ್ವಿಟರ್ನಲ್ಲಿ ತಮಾಷೆಯಾಗಿ ತೆಗೆದುಕೊಂಡಿದ್ದರೆ, ತಮ್ಮ ಫೋಟೋ ನೋಡಿ ಹಲವರು ಕಂಗಾಲಾಗಿದ್ದಾರೆ.
ಒಬ್ಬ ಚಾಲಕ ಹೆಲ್ಮೆಟ್ ಇಲ್ಲದೇ ಇರುವ ತನ್ನ ಫೋಟೋ ನೋಡಿ “ಧನ್ಯವಾದಗಳು @PuneCityPolice. ನಾನು ಚೆನ್ನಾಗಿ ಕಾಣುತ್ತೇನೆ. ಆದರೂ ಚಲನ್ ಪಾವತಿಸುತ್ತೇನೆ,” ಎಂದು ಬರೆದುಕೊಂಡಿದ್ದಾನೆ.
ಅದಕ್ಕೆ ಪುಣೆ ಪೊಲೀಸರು ಪ್ರತಿಕ್ರಿಯೆ ನೀಡಿ “ಖಂಡಿತ. P.S: ಕಪ್ಪು ಹೆಲ್ಮೆಟ್ ಧರಿಸಿದರೆ ನಿಮ್ಮ ಸುಂದರವಾದ ಕಪ್ಪು ಜಾಕೆಟ್‌ಗೆ ಮ್ಯಾಚಿಂಗ್ ಆಗುತ್ತದೆ, ಸೋ ಹೆಲ್ಮೆಟ್ ಧರಿಸಿ” ಎಂದಿದ್ದಾರೆ. ಹೀಗೆ ಹಲವು ಕುತೂಹಲದ ಬರಹಗಳನ್ನು ಇದರಲ್ಲಿ ಕಾಣಬಹುದು.
https://twitter.com/RAJESHSRIVASTA7/status/1600753467806875649?ref_src=twsrc%5Etfw%7Ctwcamp%5Etweetembed%7Ctwterm%5E1600753467806875649%7Ctwgr%5E8af1f0297685890ad9dd016be27f5b4f4056a796%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmans-conversation-with-pune-police-on-twitter-about-riding-without-a-helmet-goes-viral-2306940-2022-12-08