alex Certify ಐಸ್​ಕ್ರೀಂ ಅಂಗಡಿಯವನಿಗೆ ಚಮಕ್​ ಕೊಟ್ಟ ಗ್ರಾಹಕ…..! ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ಕ್ರೀಂ ಅಂಗಡಿಯವನಿಗೆ ಚಮಕ್​ ಕೊಟ್ಟ ಗ್ರಾಹಕ…..! ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ಈ ವಿಡಿಯೋ

ಟರ್ಕಿಶ್​ ರೀತಿಯಲ್ಲಿ ಐಸ್​ ಕ್ರೀಂ ಸರ್ವ್ ಮಾಡುವ ಸಾಕಷ್ಟು ವಿಡಿಯೋಗಳನ್ನು ನೀವು ಸೋಶಿಯಲ್​ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಅಥವಾ ನಿಮಗೂ ಇದರ ಅನುಭವ ಇದ್ದಿರಬಹುದು. ಇವರು ಅಷ್ಟು ಸುಲಭಕ್ಕೆ ನಿಮ್ಮ ಕೈಗೆ ನಿಮಿಷ್ಟದ ಐಸ್​ಕ್ರೀಂ ನೀಡೋದಿಲ್ಲ. ಸಿಕ್ಕಾಪಟ್ಟೆ ಕಾಡಿಸಿ, ಪೀಡಿಸಿ, ಕಿರಿಕಿರಿ ನೀಡಿ ಕೊನೆಗೆ ಐಸ್​ಕ್ರೀಂ ನೀಡುತ್ತಾರೆ.

ಯಾವಾಗಲೂ ಗ್ರಾಹಕರಿಗೆ ಚಮಕ್​ ನೀಡುವ ಈ ಐಸ್​ಕ್ರೀಂ ಮಳಿಗೆ ಸಿಬ್ಬಂದಿಗೆ ಈ ಬಾರಿ ಗ್ರಾಹಕನೇ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಹೌದು..! ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಟರ್ಕಿಶ್​ ರೀತಿಯಲ್ಲಿ ಐಸ್​ಕ್ರೀಂ ನೀಡದೇ ಸತಾಯಿಸುತ್ತಿದ್ದ ಸಿಬ್ಬಂದಿಯ ಕೈನಿಂದ ಗ್ರಾಹಕ ದೊಡ್ಡ ಸ್ಕೂಪ್​ ಐಸ್​ಕ್ರೀಂನ್ನೇ ಹೊತ್ತೊಯ್ದಿದ್ದಾನೆ. ಇದನ್ನು ನೋಡಿದ ಸುತ್ತಲಿನ ಜನರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ಈ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಶೇರ್​ ಮಾಡಲಾಗಿದ್ದರು ಕೆಲವೇ ಗಂಟೆಗಳಲ್ಲಿ 42 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಇದೀಗ ಎಲ್ಲಾ ಸೋಶಿಯಲ್​ ಮೀಡಿಯಾದ ವೇದಿಕೆಗಳಲ್ಲೂ ಈ ವಿಡಿಯೋ ಧೂಳೆಬ್ಬಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...