ಪುಣೆ: ಕೋವಿಡ್ ಸಂಕಷ್ಟದ ಕಾರಣ ಎರಡು ವರ್ಷದ ಹಿಂದೆ ಹೇರಲಾದ ಹಣ್ಣು ರಫ್ತು ನಿಷೇಧ ರದ್ದಾದ ಬಳಿಕ, ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಭಾರತದ ಮಾವಿನ ಹಣ್ಣಿನ ರುಚಿಯನ್ನು ಸವಿಯಲಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದ ಬಾರಾಮಿತಿ ಮಾವಿನ ಹಣ್ಣುಗಳು ಶ್ವೇತ ಭವನಕ್ಕೆ ತಲುಪಿವೆ.
ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ನಡೆದ ಮಾವು ಪ್ರಚಾರ ಕಾರ್ಯಕ್ರಮದ ವೇಳೆ ಶ್ವೇತಭವನಕ್ಕೆ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಉಡುಗೊರೆಯಾಗಿ ಕಳುಹಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಕೇಸರ್, ಹಪುಸ್, ಮಂಕೂರ್ ಮತ್ತು ಆಂಧ್ರಪ್ರದೇಶದಿಂದ ಹಿಮಾಯತ್ ಮತ್ತು ಬೇಗಂಪಲ್ಲಿ ಮಾವಿನ ಹಣ್ಣುಗಳಿದ್ದವು.
ಪರ್ವತ ಸಿಂಹದ ವಿರುದ್ಧ ಹೋರಾಡಿ ಮಾಲೀಕರನ್ನು ರಕ್ಷಿಸಿದ ಶ್ವಾನ
ಬಾರಾಮತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಭಾಗವಾಗಿರುವ ಪುಣೆ ಮೂಲದ ರೈನ್‌ಬೋ ಇಂಟರ್‌ನ್ಯಾಶನಲ್ ಈ ಮಾವುಗಳನ್ನು ರಫ್ತು ಮಾಡಿದೆ. ಒಂದೆರಡು ದಿನಗಳ ಹಿಂದೆ ಸಂಸದೆ ಸುಪ್ರಿಯಾ ಸುಳೆ ಅವರು ಟ್ವಿಟರ್‌ನಲ್ಲಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು.
ಬಾರಾಮತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮತ್ತು ಇಸ್ರೇಲ್ ಸೇರಿ 31 ದೇಶಗಳಿಗೆ ಮಾವಿನ ಹಣ್ಣನ್ನು ರಫ್ತು ಮಾಡುತ್ತದೆ. ಇದುವರೆಗೆ 400 ಟನ್ ಮಾವು ರಫ್ತಾಗಿದ್ದು, ಅದರಲ್ಲಿ 200 ಟನ್ ಅಮೆರಿಕಕ್ಕೆ ತಲುಪಿದೆ.