alex Certify ಪರ್ವತ ಸಿಂಹದ ವಿರುದ್ಧ ಹೋರಾಡಿ ಮಾಲೀಕರನ್ನು ರಕ್ಷಿಸಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರ್ವತ ಸಿಂಹದ ವಿರುದ್ಧ ಹೋರಾಡಿ ಮಾಲೀಕರನ್ನು ರಕ್ಷಿಸಿದ ಶ್ವಾನ

ನಾಯಿಗಳಿಗಿರುವ ನಿಯತ್ತು ಮನುಷ್ಯರಿಗಿರುವುದಿಲ್ಲ ಎಂಬುದು ಜನಜನಿತ ಮಾತು. ತನಗೆ ಅನ್ನ ಹಾಕಿದ ಮಾಲೀಕರಿಗೆ ಅವು ಯಾವಾಗಲೂ ಋಣಿಯಾಗಿರುತ್ತವೆ. ಅಲ್ಲದೆ ಮಾಲೀಕರೇನಾದ್ರೂ ಆಪತ್ತಿನಲ್ಲಿ ಸಿಲುಕಿದ್ರೆ ತನ್ನ ಪ್ರಾಣವನ್ನಾದ್ರೂ ಒತ್ತೆಯಿಟ್ಟು ಕಾಪಾಡಲು ಅವು ಹಿಂಜರಿಯುವುದಿಲ್ಲ. ಇದೀಗ ಪರ್ವತ ಸಿಂಹದ ದಾಳಿಯಿಂದ ತನ್ನ ಮಾಲೀಕರನ್ನು ಶ್ವಾನ ರಕ್ಷಿಸಿರುವ ಟ್ವೀಟ್ ವೈರಲ್ ಆಗಿದೆ.

ಮಹಿಳೆಯೊಬ್ಬಳು ನಡೆದುಕೊಂಡು ಹೋಗುವಾಗ ಪರ್ವತ ಸಿಂಹ ಆಕೆಯ ಮೇಲೆ ದಾಳಿ ಎಸಗಿರೋ ಘಟನೆ ಉತ್ತರ ಕ್ಯಾಲಿಫೋರ್ನಿಯಾದ ನಡೆದಿದೆ. ಈ ವೇಳೆ ಆಕೆಯ ಜೊತೆಗಿದ್ದ ಸಾಕು ನಾಯಿ ತನ್ನ ಮಾಲೀಕಳನ್ನು ರಕ್ಷಿಸುವ ಸಲುವಾಗಿ ಪರ್ವತ ಸಿಂಹದ ಎದುರು ನಿಂತು ಕಾದಾಡಿ, ಆಕೆಯನ್ನು ರಕ್ಷಿಸಿದೆ.

ಉತ್ತರ ಕ್ಯಾಲಿಫೋರ್ನಿಯಾದ ಟ್ರಿನಿಟಿ ನದಿಯ ಬಳಿ ಎರಿನ್ ವಿಲ್ಸನ್ ತನ್ನ ಸಾಕು ನಾಯಿ ಜೊತೆ ಅಡ್ಡಾಡುತ್ತಿದ್ದಳು. ಈ ವೇಳೆ ಪರ್ವತ ಸಿಂಹವು ಆಕೆಯ ಮೇಲೆ ದಾಳಿ ಮಾಡಿದೆ. ಈ ವೇಳೆ ಆಕೆ ಭೀತಿಯಿಂದ ಕಿರುಚಿದ್ದಾಳೆ. ಶೀಘ್ರದಲ್ಲೇ ಪರ್ವತ ಸಿಂಹವನ್ನು ನೋಡಿದ ಶ್ವಾನ ಅದರ ಮೇಲೆ ಮುಗಿಬಿದ್ದಿದೆ. ಘಟನೆಯಿಂದ ನಾಯಿ ತೀವ್ರವಾಗಿ ಗಾಯಗೊಂಡಿದೆ. ಶ್ವಾನಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದೆ. ತನ್ನ ಶ್ವಾನವು ತನ್ನ ಪ್ರಾಣವನ್ನು ಹೇಗೆ ರಕ್ಷಿಸಿತು ಎಂಬುದನ್ನು ಮಹಿಳೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನೆಟ್ಟಿಗರು ಶ್ವಾನದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೇಳೋದು ಅಲ್ವಾ ನಾಯಿಗಳಿಗಿರುವ ಸ್ವಾಮಿನಿಷ್ಠೆ ಮಾನವರಿಗೆ ಇರುವುದಿಲ್ಲವೆಂದು..

— WeRateDogs® (@dog_rates) May 19, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...