ಮಂಗಳೂರು: ಆನ್ಲೈನ್ನಲ್ಲಿ ಒಂದು ಆರ್ಡರ್ ಮಾಡಿದಾಗ ಇನ್ನೊಂದು ಬರುವುದು ಆಗಾಗ್ಗೆ ನಡೆದೇ ಇದೆ. ಮಂಗಳೂರಿನಲ್ಲಿ ನಡೆದ ಇಂಥದ್ದೇ ಒಂದು ಘಟನೆ ನಡೆದಿದೆ. ಮಂಗಳೂರಿನ ಚಿನ್ಮಯ ರಮಣ ಎಂಬವರು ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರೆ, ಅವರ ಮನೆಗೆ ಬಂದದ್ದು ಬೃಹತ್ ಕಲ್ಲು!
ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದಿವಾಲಿ ಸೇಲ್ನಲ್ಲಿ ಚಿನ್ಮಯ ಅವರು ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಅದು ಬರುವುದನ್ನೇ ಕಾಯುತ್ತಿದ್ದರು. ಆದರೆ ಪಾರ್ಸೆಲ್ ತೆಗೆದು ನೋಡಿದಾಗಲೇ ತಿಳಿದದ್ದು, ಅದು ಲ್ಯಾಪ್‌ಟಾಪ್ ಅಲ್ಲ, ಬದಲಿಗೆ ದೊಡ್ಡ ಕಲ್ಲು ಎಂದು.
ಈ ವಿಚಾರವನ್ನು ಅವರೇ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಸ್ನೇಹಿತನಿಗೆಂದು ಅಕ್ಟೋಬರ್ 15 ರಂದು Asus TUF Gaming F15 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದ್ದೆ. ನಂತರ ಮನೆಗೆ ಬಂದ ಪಾರ್ಸೆಲ್ ನೋಡಿದಾಗ ಅದರಲ್ಲಿ ಕಲ್ಲು ಇತ್ತು. ನಂತರ ಫ್ಲಿಪ್ಕಾರ್ಟ್ನ ಕಸ್ಟಮರ್ ಕೇರ್ಗೆ ದೂರು ನೀಡಿದ್ದು, ಸಂಪೂರ್ಣ ಹಣವನ್ನು ಹಿಂದಿರುಗಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.