ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪಿ ಕಾಮತ್ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ರೋಗಿಯು ಮಾಡಿದ ಸಾಧನೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಜನ್ಮಾಷ್ಟಮಿಯ ದಿನದಂದು ಡಾ. ಕಾಮತ್ರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಬರೋಬ್ಬರಿ 88 ಖಾದ್ಯಗಳನ್ನು ತಯಾರಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ಇವರು ಮತ್ತು ಶ್ರೀಕೃಷ್ಣನ ಮೇಲೆ ಇವರಿಗಿರುವ ಭಕ್ತಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಇವರು ನನ್ನ ಪೇಷೆಂಟ್. ತಮ್ಮ ಹಿಂದಿನ ದಾಖಲೆಯನ್ನು ಈ ಮಹಿಳೆ ಇಂದು ಮುರಿದಿದ್ದಾರೆ. ಗೋಕುಲಾಷ್ಟಮಿ ನಿಮಿತ್ತ ನಿನ್ನೆ 88 ಖಾದ್ಯಗಳನ್ನು ಇವರು ತಯಾರಿಸಿದ್ದಾರೆ ಎಂದು ಈ ಫೋಟೋಗಳಿಗೆ ಡಾ ಕಾಮತ್ ಶೀರ್ಷಿಕೆ ನೀಡಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯು ಪ್ರಮುಖ ಹಿಂದೂ ಹಬ್ಬಗಳ ಪೈಕಿ ಒಂದಾಗಿದೆ. ನಿನ್ನೆ ದೇಶಾದ್ಯಂತ ಬಹಳ ಉತ್ಸಾಹದಿಂದ ಗೋಕುಲಾಷ್ಟಮಿಯನ್ನು ಆಚರಿಸಲಾಗಿದೆ. ಈ ಹಬ್ಬವು ಭಗವಾನ್ ವಿಷ್ಣುವಿನ ಅವತಾರವಾದ ಕೃಷ್ಣನ ಜನ್ಮದಿನವನ್ನು ನೆನಪಿಸುವ ಹಬ್ಬವಾಗಿದೆ. ಸೆಪ್ಟೆಂಬರ್ ಆರು ಹಾಗೂ ಏಳರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.