alex Certify ‘ಮನಸ್ಮಿತ’ ಸಿನಿಮಾದ ಎರಡನೇ ಹಾಡಿಗೂ ಪ್ರೇಕ್ಷಕರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮನಸ್ಮಿತ’ ಸಿನಿಮಾದ ಎರಡನೇ ಹಾಡಿಗೂ ಪ್ರೇಕ್ಷಕರು ಫಿದಾ

ಸ್ಯಾಂಡಲ್ ವುಡ್ ನಲ್ಲಿ ಸಂಗೀತದ ಮೂಲಕ ಮೋಡಿ ಮಾಡಲು ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ʼಮನಸ್ಮಿತʼ ಸಿನಿಮಾ ಬರ್ತಿದೆ. ಸುಮಾರು ವರ್ಷಗಳ ನಂತರ ಮ್ಯೂಸಿಕಲ್ ಲವ್ ಸ್ಟೋರಿ ಮಾದರಿಯ ಸಿನಿಮಾ ಹಾಡುಗಳು ಈಗಾಗಲೇ ಗಮನ ಸೆಳೆಯುತ್ತಿದೆ. ಶಂಕರ್ ಮಹದೇವನ್ ಹಾಡಿರುವ ಮೊದಲ ಹಾಡು ಸಿನಿಪ್ರಿಯರ ಮನಗೆದ್ದಿದ್ದು, ಇಂದು ಚಿತ್ರದ 2ನೇ ಹಾಡನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ.

ಮನಸ್ಮಿತ ಸಿನಿಮಾದ ಮೊದಲ ಹಾಡಿಗೆ ಕ್ಲಾಸಿಕ್ ಟಚ್ ನೀಡಲಾಗಿತ್ತು. ವಾರದ ಹಿಂದೆ ಬಿಡುಗಡೆಯಾದ ಹಾಡಿಗೆ ಸಿನಿಮಾ ಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನೀಲ ಮೇಘ ಶ್ಯಾಮ ಹಾಡಿಗೆ ಜನರು ಫಿದಾ ಆಗಿದ್ದಾರೆ.

ಶಂಕರ್ ಮಹದೇವನ್ ಅವರ ಧ್ವನಿಯಲ್ಲಿ ಬಂದಿರುವ ಹಾಡು ಜನರನ್ನ ಸೆಳೆಯುತ್ತಿದೆ. ಇದೀಗ ರಿಲೀಸ್ ಆಗಿರುವ 2 ನೇ ಹಾಡು ಕಂಪ್ಲೀಟಾಗಿ ಮೆಲೋಡಿ ಸಾಂಗ್. ರೋಮ್ಯಾಂಟಿಕ್ ಮೆಲೋಡಿ ಹಾಡು ‘ಮುದ್ದು ಬಾನುಲಿ ವರದಿ’ ಹಾಡು ಸಹ ಅಷ್ಟೇ ಮೋಡಿ ಮಾಡುತ್ತಿದೆ.

ಈ ಹಾಡಿನಲ್ಲಿ ನಾಯಕ – ನಾಯಕಿಯ ಕೆಮಿಸ್ಟ್ರಿಯನ್ನು ಅದ್ಬುತವಾಗಿ ತೋರಿಸಲಾಗಿದೆ. ಸಾಂಗ್ ಶೂಟ್ ಮಾಡಿರುವ ಲೊಕೇಶನ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಮೈ ಮರೆಸುವ ಈ ಹಾಡಿಗೆ ಸಿನಿಮಾದ ಸಂಗೀತ ಜವಾಬ್ದಾರಿ ಹೊತ್ತಿರುವ ಮ್ಯೂಸಿಕ್ ಡೈರೆಕ್ಟರ್ ಹರಿಕಾವ್ಯ ಅವರೇ ಧ್ವನಿಯಾಗಿ ಜೀವ ತುಂಬಿದ್ದಾರೆ. ಅವರ ಜೊತೆಗೆ ಹರಿಹರನ್, ಸನಾ ಮೈದುಟ್ಟಿ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.

ಹಾಡಿನ ರಚನೆ ಕೆ. ಕಲ್ಯಾಣ್ ಅವರದ್ದು. ಅಪ್ಪಣ್ಣ ಸಂತೋಷ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಹೊಸಬರ ದಂಡೇ ಇದೆ. ಜೊತೆಗೆ ಅನುಭವಿ ನಟರ ಸಾಥ್ ಇದೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾಕ್ಕೆ ಪ್ರೇಕ್ಷಕರು ಯಾವ ರೀತಿ ರಿಯಾಕ್ಷನ್ ನೀಡ್ತಾರೆ ಕಾದು ನೋಡ್ಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...