alex Certify ಕಾಂಗ್ರೆಸ್ ​​ನಲ್ಲಿ ಅನಾಥೆಯಂತೆ ನಡೆಸಿಕೊಂಡರು; ದಲಿತ ನಾಯಕಿಯ ಆಕ್ರೋಶದ ನುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ​​ನಲ್ಲಿ ಅನಾಥೆಯಂತೆ ನಡೆಸಿಕೊಂಡರು; ದಲಿತ ನಾಯಕಿಯ ಆಕ್ರೋಶದ ನುಡಿ

ದಲಿತ ಮುಖಂಡೆ ಪ್ರೀತಾ ಹರಿತ್​​​ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ನ ಆಡಳಿತ ಮಂಡಳಿಯು ನಿಜಕ್ಕೂ ಕೆಟ್ಟದಾಗಿದ್ದು ಪಕ್ಷದಲ್ಲಿ ಅನಾಥಳಂತೆ ಭಾಸವಾಗ್ತಿದೆ ಎಂದು ಪ್ರೀತಾ ಹೇಳಿದ್ದಾರೆ. 2019ರಲ್ಲಿ ಕಾಂಗ್ರೆಸ್​ ಸೇರಿದ್ದ ಪ್ರೀತಾ ತಾವು ದಲಿತ ಸಮುದಾಯದ ಹಕ್ಕುಗಳಿಗೆ ಹೋರಾಡಲು ಈ ಪಕ್ಷಕ್ಕೆ ಸೇರಿದ್ದೆ. ಆದರೆ ಇಲ್ಲಿ ನಮ್ಮ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

BIG NEWS: ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋದರು…; ಕನ್ಹಯ್ಯ ಕುಮಾರ್ ವಿರುದ್ಧ ಕಿಡಿಕಾರಿದ ಸಿ.ಟಿ.ರವಿ

ಕಾಂಗ್ರೆಸ್​​ ಆಡಳಿತ ಮಂಡಳಿ ಅತ್ಯಂತ ಕೆಟ್ಟದಾಗಿದೆ. ನನಗಂತೂ ಅನಾಥಳಂತೆ ಭಾಸವಾಗುತ್ತಿತ್ತು. ನಮ್ಮ ಸೇವೆಯ ಲಾಭವನ್ನು ಅವರು ಬಳಸಿಕೊಳ್ಳಲೇ ಇಲ್ಲ. ನಾನು ದಲಿತ ಬಹುಜನ ಸಮುದಾಯದ ಪರವಾಗಿ ಕೆಲಸ ಮಾಡಲು ಈ ಪಕ್ಷವನ್ನು ಸೇರಿದ್ದೆ. ಆದರೆ ನನ್ನ ವಿಚಾರಗಳನ್ನು ಪಕ್ಷ ನಿರ್ಲಕ್ಷಿಸಿದೆ. ಕಾಂಗ್ರೆಸ್​ನಲ್ಲಿ ಆಂತರಿಕವಾಗಿ ಅನೇಕ ಗೊಂದಲವಿದೆ. ನಾವು ಯಾರಿಗೆ ವರದಿ ಮಾಡಬೇಕು, ನಮಗೆ ಕೆಲಸ ಮಾಡಲು ಯಾರು ಸೂಚನೆ ನೀಡ್ತಾರೆ ಹೀಗೆ ಯಾವ ವಿಚಾರದಲ್ಲೂ ಸ್ಪಷ್ಟತೆ ಇಲ್ಲ ಎಂದು ಪ್ರೀತಾ ಗುಡುಗಿದ್ದಾರೆ.

ʼಕಾಂಗ್ರೆಸ್ʼ ಸೇರ್ಪಡೆ ಹಿಂದಿನ ಕಾರಣ ಬಿಚ್ಚಿಟ್ಟ ಜಿಗ್ನೇಶ್​ ಮೇವಾನಿ

ಬಹುಜನ ಸಮ್ಯಕ್​​ ಸಂಘಟನ್​​​ ಸ್ಥಾಪಕಿಯಾಗಿರುವ ಪ್ರೀತಾ ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ತೆರಿಗೆ ಇಲಾಖೆ ಪ್ರಿನ್ಸಿಪಾಲ್​ ಕಮಿಷನರ್​ ಆಗಿದ್ದರು. ಪ್ರೀತಾರ ರಾಜೀನಾಮೆಯು ಕಾಂಗ್ರೆಸ್​ಗೆ ಪಂಜಾಬ್​ ಹಾಗೂ ಚತ್ತೀಸಗಢ ಭಾಗದಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಪಂಜಾಬ್​ನಲ್ಲಿ ಈಗಾಗಲೇ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ನವಜೋತ್​ ಸಿಂಗ್​ ಸಿಧು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಓರ್ವ ಸಚಿವ ಹಾಗೂ ಮೂವರು ಕಾಂಗ್ರೆಸ್​ ನಾಯಕರು ಸಹ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...