ದಲಿತ ಮುಖಂಡೆ ಪ್ರೀತಾ ಹರಿತ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ನ ಆಡಳಿತ ಮಂಡಳಿಯು ನಿಜಕ್ಕೂ ಕೆಟ್ಟದಾಗಿದ್ದು ಪಕ್ಷದಲ್ಲಿ ಅನಾಥಳಂತೆ ಭಾಸವಾಗ್ತಿದೆ ಎಂದು ಪ್ರೀತಾ ಹೇಳಿದ್ದಾರೆ. 2019ರಲ್ಲಿ ಕಾಂಗ್ರೆಸ್ ಸೇರಿದ್ದ ಪ್ರೀತಾ ತಾವು ದಲಿತ ಸಮುದಾಯದ ಹಕ್ಕುಗಳಿಗೆ ಹೋರಾಡಲು ಈ ಪಕ್ಷಕ್ಕೆ ಸೇರಿದ್ದೆ. ಆದರೆ ಇಲ್ಲಿ ನಮ್ಮ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
BIG NEWS: ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋದರು…; ಕನ್ಹಯ್ಯ ಕುಮಾರ್ ವಿರುದ್ಧ ಕಿಡಿಕಾರಿದ ಸಿ.ಟಿ.ರವಿ
ಕಾಂಗ್ರೆಸ್ ಆಡಳಿತ ಮಂಡಳಿ ಅತ್ಯಂತ ಕೆಟ್ಟದಾಗಿದೆ. ನನಗಂತೂ ಅನಾಥಳಂತೆ ಭಾಸವಾಗುತ್ತಿತ್ತು. ನಮ್ಮ ಸೇವೆಯ ಲಾಭವನ್ನು ಅವರು ಬಳಸಿಕೊಳ್ಳಲೇ ಇಲ್ಲ. ನಾನು ದಲಿತ ಬಹುಜನ ಸಮುದಾಯದ ಪರವಾಗಿ ಕೆಲಸ ಮಾಡಲು ಈ ಪಕ್ಷವನ್ನು ಸೇರಿದ್ದೆ. ಆದರೆ ನನ್ನ ವಿಚಾರಗಳನ್ನು ಪಕ್ಷ ನಿರ್ಲಕ್ಷಿಸಿದೆ. ಕಾಂಗ್ರೆಸ್ನಲ್ಲಿ ಆಂತರಿಕವಾಗಿ ಅನೇಕ ಗೊಂದಲವಿದೆ. ನಾವು ಯಾರಿಗೆ ವರದಿ ಮಾಡಬೇಕು, ನಮಗೆ ಕೆಲಸ ಮಾಡಲು ಯಾರು ಸೂಚನೆ ನೀಡ್ತಾರೆ ಹೀಗೆ ಯಾವ ವಿಚಾರದಲ್ಲೂ ಸ್ಪಷ್ಟತೆ ಇಲ್ಲ ಎಂದು ಪ್ರೀತಾ ಗುಡುಗಿದ್ದಾರೆ.
ʼಕಾಂಗ್ರೆಸ್ʼ ಸೇರ್ಪಡೆ ಹಿಂದಿನ ಕಾರಣ ಬಿಚ್ಚಿಟ್ಟ ಜಿಗ್ನೇಶ್ ಮೇವಾನಿ
ಬಹುಜನ ಸಮ್ಯಕ್ ಸಂಘಟನ್ ಸ್ಥಾಪಕಿಯಾಗಿರುವ ಪ್ರೀತಾ ಕಾಂಗ್ರೆಸ್ ಸೇರ್ಪಡೆಗೂ ಮುನ್ನ ತೆರಿಗೆ ಇಲಾಖೆ ಪ್ರಿನ್ಸಿಪಾಲ್ ಕಮಿಷನರ್ ಆಗಿದ್ದರು. ಪ್ರೀತಾರ ರಾಜೀನಾಮೆಯು ಕಾಂಗ್ರೆಸ್ಗೆ ಪಂಜಾಬ್ ಹಾಗೂ ಚತ್ತೀಸಗಢ ಭಾಗದಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಪಂಜಾಬ್ನಲ್ಲಿ ಈಗಾಗಲೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಓರ್ವ ಸಚಿವ ಹಾಗೂ ಮೂವರು ಕಾಂಗ್ರೆಸ್ ನಾಯಕರು ಸಹ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.