alex Certify ಕನಸಿನಲ್ಲಿ ಬಂದ ಸಂಖ್ಯೆಗಳನ್ನೇ ಖರೀದಿಸಿ 1.9 ಕೋಟಿ ರೂ. ಬಂಪರ್ ಲಾಟರಿ ಗೆದ್ದ ವ್ಯಕ್ತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನಲ್ಲಿ ಬಂದ ಸಂಖ್ಯೆಗಳನ್ನೇ ಖರೀದಿಸಿ 1.9 ಕೋಟಿ ರೂ. ಬಂಪರ್ ಲಾಟರಿ ಗೆದ್ದ ವ್ಯಕ್ತಿ…..!

ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅನೇಕ ಜನರು ತಮ್ಮ ಭವಿಷ್ಯದಲ್ಲಿ ಅವರು ಕನಸಿನಲ್ಲಿ ನೋಡಿದ ಘಟನೆಯನ್ನು ಊಹಿಸಲು ಸಮರ್ಥರಾಗಿದ್ದಾರೆ. ದೇವರು ಅವರ ಕನಸಿನಲ್ಲಿ ಬಂದು ಮಾತನಾಡುತ್ತಾನೆ, ಅವರಿಗೆ ಮಾರ್ಗದರ್ಶನ ನೀಡುತ್ತಾನೆ ಮತ್ತು ರಕ್ಷಿಸುತ್ತಾನೆ ಎಂದು ಕೆಲವರು ಇಂಥಾ ನಂಬಿಕೆಯುಳ್ಳವರು ಹೇಳುತ್ತಾರೆ. ಇದೀಗ ಅಮೆರಿಕಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕನಸಿನಲ್ಲಿ ಬಂದ ಸಂಖ್ಯೆಗಳನ್ನು ಬಳಸಿಕೊಂಡು ಭಾರಿ ಲಾಟರಿ ಬಹುಮಾನವನ್ನು ಗೆದ್ದಿದ್ದಾರೆ.

ಹೌದು, ವರ್ಜೀನಿಯಾದ ಹೆನ್ರಿಕೊದ ಅಲೋಂಜೊ ಕೋಲ್‌ಮನ್ ಅವರು 250,000 ಡಾಲರ್ (ಸುಮಾರು ರೂ 1.96 ಕೋಟಿ) ಲಾಟರಿ ಬಹುಮಾನವನ್ನು ಗೆದ್ದಿದ್ದಾರೆ. ಈ ಆರು ಸಂಖ್ಯೆಗಳು ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡಿತ್ತಂತೆ. ನಂಬಲು ಕಷ್ಟವಾದ್ರೂ ಇದು ನಿಜ ಎಂದು ಅವರು ಹೇಳುತ್ತಾರೆ.

ಅವನು ಕನಸಿನಲ್ಲಿ ಕಂಡ ಮ್ಯಾಜಿಕ್ ಸಂಖ್ಯೆಗಳು ಯಾವುವು ಗೊತ್ತಾ? ವರದಿಗಳ ಪ್ರಕಾರ, ಅಲೋಂಜೊ ತನ್ನ ಅದೃಷ್ಟದ ಬ್ಯಾಂಕ್ ಎ ಮಿಲಿಯನ್ ಟಿಕೆಟ್ ಅನ್ನು ಹೆನ್ರಿಕೊದಲ್ಲಿನ ಗ್ಲೆನ್‌ಸೈಡ್ ಕಾರ್ನರ್ ಮಾರ್ಟ್‌ನಿಂದ ಖರೀದಿಸಿದ್ದಾರೆ. ಅವರು ತಮ್ಮ ಕನಸಿನಲ್ಲಿ ನೋಡಿದ ಆರು, ವಿಚಿತ್ರ ಅನುಕ್ರಮ ಸಂಖ್ಯೆಗಳನ್ನು ಆರಿಸಿಕೊಂಡಿದ್ದಾರೆ: 13-14-15-16-17-18. ಬೋನಸ್ ಬಾಲ್ 19 ಆಗಿತ್ತು. ಹೀಗೆ ಕನಸಿನಲ್ಲಿ ಕಾಣಿಸಿಕೊಂಡ ಸಂಖ್ಯೆಯನ್ನೇ ಈತ ಖರೀದಿಸಿದ್ದರಿಂದ ಬಂಪರ್ ಲಾಟರಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...