ಅರಿಜೋನಾದ ವ್ಯಕ್ತಿಯೊಬ್ಬರು ಕಳೆದ ತಿಂಗಳು ಲಾಸ್ ವೇಗಾಸ್‌ನಲ್ಲಿ ಸುಮಾರು $230,000 (ರೂ. 1.7 ಕೋಟಿ) ಜಾಕ್‌ಪಾಟ್ ಅನ್ನು ಗೆದ್ದಿದ್ದಾರೆ. ಆದರೆ ಅವರಿಗೆ ತಮ್ಮ ಗೆಲುವಿನ ಬಗ್ಗೆ ತಿಳಿಯದೆ ಮನೆಗೆ ಮರಳಿದ್ದಾರೆ.
ಸಾಮಾನ್ಯವಾಗಿ ಆಟಗಾರನೊಬ್ಬನು ಗೆದ್ದಾಗ ಸ್ಲಾಟ್ ಯಂತ್ರಗಳು ಲೈಟ್‌ಗಳು, ಸೌಂಡ್ ಎಫೆಕ್ಟ್‌ಗಳು ಮತ್ತು ಹೆಚ್ಚುವರಿ ರಾಝಲ್-ಡ್ಯಾಝಲ್‌ನೊಂದಿಗೆ ಝೇಂಕರಿಸುತ್ತವೆ. ಆದರೆ ಲಾಸ್ ವೇಗಾಸ್‌ನಲ್ಲಿರುವ ಟ್ರೆಷರ್ ಐಲ್ಯಾಂಡ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ರಾಬರ್ಟ್ ಟೇಲರ್‌ನ ಸ್ಲಾಟ್ ಯಂತ್ರವು ಅವರಿಗೆ ಗೆಲುವಿನ ಬಗ್ಗೆ ತಿಳಿಸದೆ ಮೌನವಾಗಿದ್ದೆ ಈ ಘಟನೆಗೆ ಕಾರಣ ಎಂದು ವರದಿಯಾಗಿದೆ.
ಸಂವಹನ ದೋಷದಿಂದ ಯಂತ್ರವು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ನೆವಾಡಾ ಗೇಮಿಂಗ್ ಬೋರ್ಡ್ ಸ್ಪಷ್ಟಪಡಿಸಿದೆ. ಜನವರಿ 8 ರಂದು ಟೇಲರ್ ಅವರು $229,368.52 ಜಾಕ್‌ಪಾಟ್ ಗೆದ್ದು ಶ್ರೀಮಂತರಾಗಿದ್ದಾರೆ ಎಂದು ಅವರಿಗೆ ತಿಳಿದೇ ಇರಲಿಲ್ಲ. ಪರಿಸ್ಥಿತಿಯ ಪರಿಶೀಲನೆ ನಡೆಸಿ ಕ್ಯಾಸಿನೊ ಸಿಬ್ಬಂದಿ ಟೇಲರ್‌ನ ಗೆಲುವನ್ನು ದೃಢಪಡಿಸುವ ಹೊತ್ತಿಗೆ, ಅವರು ಅದಾಗಲೇ ಅರಿಝೋನಾದ ತಮ್ಮ ಮನೆಗೆ ಮರಳಿದ್ದರು.
ಮಣಿಪುರ ಸಿಎಂ ಅಳಿಯನ ಬಳಿಯಿದೆ ಮಾವನಿಗಿಂತ ಐದು ಪಟ್ಟು ಅಧಿಕ ಆಸ್ತಿ….!
ಜಾಕ್‌ಪಾಟ್ ವಿಜೇತರನ್ನು ಗುರುತಿಸಲು ಕ್ಯಾಸಿನೊದ ಅನೇಕ ಪ್ರಯತ್ನಗಳು ವಿಫಲವಾದ ನಂತರ, ಗೇಮಿಂಗ್ ಬೋರ್ಡ್‌ನ ವಿಭಾಗವು ತನಿಖೆಯನ್ನು ಪ್ರಾರಂಭಿಸಿತು. ರಾಬರ್ಟ್ ಅಂತಿಮವಾಗಿ ಜಾಕ್‌ಪಾಟ್ ಪ್ರಶಸ್ತಿ ವಿಜೇತ ಎಂದು ಗುರುತಿಸಲ್ಪಟ್ಟರು.
ಇಡೀ ತನಿಖೆಯು ಸಾಕಷ್ಟು ಶಿಸ್ತುಬದ್ಧವಾಗಿ ನಡೆಯಿತು. ತನಿಖಾಧಿಕಾರಿಗಳು, ಹಲವಾರು ಗಂಟೆಗಳ ಕಣ್ಗಾವಲು ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಹಲವಾರು ಸಾಕ್ಷಿಗಳ ಸಂದರ್ಶನ ಮಾಡಿದರು. ಎಲೆಕ್ಟ್ರಾನಿಕ್ ಖರೀದಿ ದಾಖಲೆಗಳ ಪರಿಶೀಲನೆ, ರೈಡ್‌ಶೇರ್ ಕಂಪನಿ ಮತ್ತು ನೆವಾಡಾ ಸಾರಿಗೆ ಪ್ರಾಧಿಕಾರದಿಂದ ರೈಡ್‌ಶೇರ್ ಡೇಟಾದ ವಿಶ್ಲೇಷಣೆಯನ್ನು ಸಹ ಮಾಡಿದ್ದರು. ಈ ಎಲ್ಲಾ ತನಿಖೆಯ ನಂತರ ಅಂತಿಮವಾಗಿ ರಾಬರ್ಟ್ ಟೇಲರ್ ಎಂಬ ಅರಿಜೋನಾದ ವ್ಯಕ್ತಿ ಜಾಕ್‌ಪಾಟ್ ಗೆದ್ದಿದ್ದರು ಎಂದು ತಿಳಿದು ಬಂದಿತು. ಬರೋಬ್ಬರಿ 20 ದಿನಗಳ ನಂತರ ರಾಬರ್ಟ್ ಗೆ ತನ್ನ ಗೆಲುವಿನ ಬಗ್ಗೆ ತಿಳಿಸಲಾಯಿತು. ಅವರು ತಮ್ಮ ಪ್ರೈಸ್ ಅಮೌಂಟ್ ಪಡೆದುಕೊಳ್ಳಲು ಮರಳಿ ಲಾಸ್ ವೇಗಾಸ್ ಗೆ ಪ್ರಯಾಣಿಸಲಿದ್ದಾರೆ.