ನಮ್ಮ ನಡುವೆ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆಯುತ್ತಿರುತ್ತದೆ. ಆದರೆ, ಮಲಗುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ? ಯೂರೋಪ್ನ ಪ್ರತಿ ವರ್ಷ ಮಾಂಟೆನೆಗ್ರೊದಲ್ಲಿ ಈ ವಿಚಿತ್ರ ಸ್ಪರ್ಧೆ ನಡೆಸಲಾಗುತ್ತದೆ.
ಈ ಬಾರಿ ಸತತ 60 ಗಂಟೆಗಳ ಕಾಲ ಮಲಗಿದ ವ್ಯಕ್ತಿ ಪ್ರಶಸ್ತಿಯನ್ನು ಪಡೆದನು. ಆತನ ಹೆಸರು ಜಾರ್ಕೊ ಪೆಜಾನೋವಿಕ್. ಈ ವಿಲಕ್ಷಣ ಸವಾಲಿನ 12ನೇ ವರ್ಷದ ಚಾಂಪಿಯನ್ ಆಗಿದ್ದಾರೆ.
ನಾನು ಈ ಸ್ಪರ್ಧೆಗೆ ತಯಾರಿ ನಡೆಸಿರಲಿಲ್ಲ. ಕಂಪನಿ ಬೆಂಬಲ ಇದ್ದರೆ ಈ ಪ್ರಯತ್ನ ಮಾಡಬಹುದು ಎಂದು ಸ್ಥಳೀಯ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.
ಸ್ಪರ್ಧೆಯು 9 ಮಂದಿ ಭಾಗವಹಿಸುವವರೊಂದಿಗೆ ಪ್ರಾರಂಭವಾಯಿತು. ಆದರೆ, ಮೊದಲ ದಿನದ ಅಂತ್ಯಕ್ಕೆ 7 ಮಂದಿ ಹೊರಬಿದ್ದರು. ಪೆಜಾನೋವಿಕ್ ಮತ್ತೊಬ್ಬ ಸ್ಪಧಿರ್ ವುಕ್ ಕೊಲ್ಜೆನ್ಸಿಕ್ ಜೊತೆಗೆ “ದೊಡ್ಡ ಸೋಮಾರಿತನ” ಶೀರ್ಷಿಕೆಗಾಗಿ ಹೋರಾಡಿದರು.
ಕೊನೆಯಲ್ಲಿ, ಪೆಜಾನೋವಿಕ್ ವಿಜಯಶಾಲಿಯಾದರು. 350 ಯುರೋ ತಮ್ಮದಾಗಿಸಿಕೊಂಡರು. ಆತ ಅರವತ್ತು ತಾಸು ನಿದ್ರಿಸಿದ ಸಾಹಸ ನಿಜಕ್ಕೂ ಆಶ್ಚರ್ಯಕರವಾದದ್ದು.