ವ್ಯಕ್ತಿಯೊಬ್ಬ ಸ್ವಮೂತ್ರ ಪಾನಮಾಡಿದ್ದರಿಂದ ಆದ ಲಾಭಗಳ ಬಗ್ಗೆ ಹೇಳಿಕೊಂಡು ಜಗತ್ತಿನ ಗಮನ ಸೆಳೆದಿದ್ದಾನೆ. 34 ವರ್ಷದ ಹ್ಯಾರಿ ಮಟಾಡೀನ್ ಎಂಬ ವ್ಯಕ್ತಿ ಸ್ವಮೂತ್ರ ಪಾನ ಪ್ರಯೋಗಕ್ಕೆ ಒಡ್ಡಿಕೊಂಡಾತ. 2016ರಿಂದ ಪ್ರತಿದಿನ 200 ಮಿಲಿ ಮೂತ್ರವನ್ನು ನಿರಂತರ ಸೇವಿಸುತ್ತಾ ಬಂದಿದ್ದಾರೆ.
ತಂದೆ ಹಾಗೂ ಬಾಯ್ಫ್ರೆಂಡ್ ಜೊತೆಗಿನ ವಿಶೇಷ ಫೋಟೋ ಶೇರ್ ಮಾಡಿದ ಅಮೀರ್ ಖಾನ್ ಪುತ್ರಿ
ಈ ರೀತಿ ಸೇವನೆಯಿಂದ ತನ್ನ ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಸಾಬೀತಾಗಿದೆ ಎಂದು ಆತ ಹೇಳಿಕೊಂಡಿರುವುದು ವಿಶೇಷ ಸಂಗತಿ. ಈ ಮುನ್ನ ಅವರು ಖಿನ್ನತೆಯಿಂದ ಬಳಲುತ್ತಿದ್ದರಂತೆ.
ಸ್ವಯಂ-ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು, ಖಿನ್ನತೆ ದೂರವಾಗುತ್ತಾ ಬಂದಿತು, ಶಾಂತ ಸ್ವಭಾವ ಕಾಣಿಸಿತು ಎಂದು ಆತ ಹೇಳಿಕೊಂಡಿದ್ದು, ನಾನು ಮೂತ್ರವನ್ನು ಸೇವಿಸಿದ ಬಳಿಕ ಅದು ನನ್ನ ಮೆದುಳನ್ನು ಎಚ್ಚರಗೊಳಿಸಿತು, ನನ್ನ ಖಿನ್ನತೆಯನ್ನು ತೆಗೆದುಹಾಕಿತು ಎಂದು ಹೇಳಿದ್ದಾರೆ.
ಮುಖದ ಮೇಲೆ ಸ್ವಯಂ ಮೂತ್ರ ಉಜ್ಜುವುದರಿಂದ ಚಿಕ್ಕವನಾಗಿ ಕಾಣಬಹುದು. ಚರ್ಮವು ಮೃದು ಮತ್ತು ಹೊಳೆಯುತ್ತದೆ ಎಂದು ತಮ್ಮಅನುಭವದ ಅಭಿಪ್ರಾಯ ನೀಡಿದ್ದಾರೆ.