ಒಡಿಶಾ : ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಈ ನಡುವೆ ಅಲ್ಲಲ್ಲಿ ಟೊಮೆಟೊ ಕಳ್ಳತನ ನಡೆಯುತ್ತಿವೆ. ಇದೀಗ ಒಡಿಶಾದಲ್ಲಿ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ವ್ಯಾಪಾರಿ ಬಳಿ ಅಡವಿಟ್ಟು ಟೊಮೆಟೊ ಖರೀದಿಸಿರುವ ಘಟನೆ ನಡೆದಿದೆ.
ಶನಿವಾರ ಒಡಿಶಾದ ಕಟಕ್ ನಗರದಲ್ಲಿ ವ್ಯಕ್ತಿಯೊಬ್ಬರು ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ವಾಷಿಂಗ್ ಮಷಿನ್ ಮನೆಗೆ ಫಿಟ್ ಮಾಡುವುದಿದೆ 300 ರೂ.ಗಳನ್ನು ನೀಡುವ ನೆಪದಲ್ಲಿ ಅವರು ಇಬ್ಬರು ಮಕ್ಕಳನ್ನು (ಅಪ್ರಾಪ್ತರು) ಕರೆದುಕೊಂಡು ಹೋಗಿದ್ದಾನೆ. ದಾರಿಯಲ್ಲಿ, ಆ ವ್ಯಕ್ತಿ ಛತ್ರಾ ಬಜಾರ್ನ ತರಕಾರಿ ಅಂಗಡಿಗೆ ಹೋದನು. 4 ಕೆಜಿ ಟೊಮೆಟೊ ಖರೀದಿಸಿದನು. ನಂತರ ನಾನು ಇನ್ನೂ 10 ಕಿಲೋ ಬಯಸಿದ್ದೆ, ಆದರೆ ಈಗ ನನ್ನ ಬಳಿ ಅಷ್ಟು ಹಣವಿಲ್ಲ. ಎಂದು ಹೇಳಿದ್ದಾನೆ.
ತರಕಾರಿ ಮಾರಾಟಗಾರ ಆ ಮಾತುಗಳನ್ನು ನಂಬಿದ್ದಾನೆ. ಬಳಿಕ ನಾಲ್ಕು ಕೆಜಿ ಟೊಮೆಟೊ ತೆಗೆದುಕೊಂಡು ನಾನು ಬರುವರೆಗೂ ಈ ಮಕ್ಕಳು ನಿನ್ನ ಹತ್ತಿರವೇ ಇರಲಿ ಎಂದು ಹೇಳಿದ್ದಾನೆ. ಇಬ್ಬರು ಮಕ್ಕಳು ವ್ಯಕ್ತಿಯ ಮಕ್ಕಳು ಎಂದು ನಂಬಿದ್ದ ವ್ಯಾಪಾರಿ ಇದಕ್ಕೆ ಒಪ್ಪಿದ್ದಾನೆ.
ಅವನು ಟೊಮೆಟೊಗಳನ್ನು ತೆಗೆದುಕೊಂಡು ಹೋಗಿ ಬಹಳ ಸಮಯದವರೆಗೆ ಹಿಂತಿರುಗಲಿಲ್ಲ. ಆಗ ವ್ಯಾಪಾರಿಗೆ ಅನುಮಾನ ಬಂದು. ನಿಮ್ಮ ತಂದೆ ಇನ್ನೂ ಏಕೆ ಬಂದಿಲ್ಲ? ಎಂದು ಕೇಳಿದರು. ಇಬ್ಬರು ಮಕ್ಕಳು ನನ್ನ ತಂದೆಯಲ್ಲ, ಅವರು ಯಾರೆಂದು ನಮಗೆ ತಿಳಿದಿಲ್ಲ ಎಂದು ಹೇಳಿದಾಗ ತಾನು ಮೋಸ ಹೋಗಿದ್ದೇನೆಂದು ವ್ಯಾಪಾರಿಗೆ ಅರಿವಾಗಿದೆ.