alex Certify ಏಕಾಏಕಿ 20 ವರ್ಷದ ಹಿಂದಿನ ಸ್ಮರಣೆಗೆ ತೆರಳಿದವನಿಗೆ ಮದುವೆಯಾಗಿರುವುದೂ ಮರೆತುಹೋಗಿದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ 20 ವರ್ಷದ ಹಿಂದಿನ ಸ್ಮರಣೆಗೆ ತೆರಳಿದವನಿಗೆ ಮದುವೆಯಾಗಿರುವುದೂ ಮರೆತುಹೋಗಿದೆ…!

ಬದುಕಿನ ಕಳೆದ 20 ವರ್ಷಗಳಲ್ಲಿ ಜರುಗಿದ ಎಲ್ಲವೂ ಇದ್ದಕ್ಕಿದ್ದಂತೆಯೇ ಮರೆತು ಹೋಗಿ ತಾನು 1999ರಲ್ಲಿ ಇರುವಂತೆ ಜೀವಿಸುತ್ತಿರುವ ವ್ಯಕ್ತಿ ಈ ಡೇನಿಯಲ್ ಪೋರ್ಟರ್‌.

2020ರ ದಿನವೊಂದರ ಬೆಳಿಗ್ಗೆ ಮಡದಿ ಪಕ್ಕ ಮಲಗೆದ್ದ ಡೇನಿಯಲ್‌, ತಾನು 1999ರಲ್ಲಿ ಇದ್ದು, ಶಾಲೆಗೆ ಹೊರಡಬೇಕೆನಿಸಿದೆ. ತನಗೆ 10 ವರ್ಷದ ಮಗಳಿರುವುದೂ ಡೇನಿಯಲ್‌ಗೆ ನೆನಪಾಗದಂತೆ ಆಗಿಬಿಟ್ಟಿತ್ತು.

ಡೇನಿಯಲ್‌ ವರ್ತನೆಯಿಂದ ಭಯಗೊಂಡ ಆತನ ಮಡದಿ ರುತ್‌ ಕೂಡಲೇ ಆಸ್ಪತ್ರೆಗೆ ಪತಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ತನ್ನ ಪತಿಗೆ ’ಟ್ರಾನ್ಸಿಯೆಂಟ್ ಗ್ಲೋಬಲ್ ಅಮ್ನೇಶಿಯಾ’ ಸಮಸ್ಯೆ ಇರುವುದು ತಿಳಿದುಬಂದಿದೆ. ಇದೊಂದು ನರ ಸಂಬಂಧಿ ಸಮಸ್ಯೆಯಾಗಿದ್ದು, ಹಿಂದಿನ ಘಟನೆಗಳನ್ನು ಸ್ಮರಿಸಲು ಸಾಧ್ಯವಾಗದಂತೆ ಮಾಡುತ್ತದೆ.

BIG NEWS: ಗಣೇಶೋತ್ಸವ ಆಚರಣೆಗೆ ಷರತ್ತು ಹಿನ್ನೆಲೆ; ಹಿಂದೂಪರ ಸಂಘಟನೆಗಳಿಂದ ತೀವ್ರಗೊಂಡ ಪ್ರತಿಭಟನೆ; ಬಿಬಿಎಂಪಿ ಕಚೇರಿಗೆ ಮುತ್ತಿಗೆ

ಮುಂದಿನ 24 ಗಂಟೆಗಳಲ್ಲಿ ಡೇನಿಯಲ್‌ಗೆ ಸ್ಮರಣೆ ಮರಳಲಿದೆ ಎಂದು ವೈದ್ಯರು ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ತನಗೊಬ್ಬ ಮಡದಿ ಇರುವುದನ್ನೂ ಡೇನಿಯಲ್ ಮರೆತುಬಿಟ್ಟಿದ್ದಾರೆ.

“ಒಂದು ಬೆಳಿಗ್ಗೆ ಹೀಗೇ ಹಾಸಿಗೆ ಮೇಲಿಂದ ಎದ್ದ ಡೇನಿಯಲ್‌ಗೆ ತಾನು ಎಲ್ಲಿರುವೆ ಅಥವಾ ನಾನು ಯಾರು ಎಂಬ ಅಂದಾಜೇ ಇರಲಿಲ್ಲ. ಆತನಿಗೆ ಬಹಳ ಗೊಂದಲವಾಗಲು ಶುರುವಾಗಿದೆ. ತಾನು ಎಲ್ಲೋ ಕುಡಿದಿರಬೇಕು ಇಲ್ಲ ಯಾರೋ ಅಪಹರಿಸಿರಬೇಕೆಂದು ಆತ ಅಂದುಕೊಂಡಿದ್ದಾನೆ” ಎಂದು ರುತ್‌ ತಿಳಿಸಿದ್ದಾರೆ.

ತಮ್ಮ ಕುಟುಂಬಕ್ಕೆ 2019 ತೀರಾ ದುರಂತಮಯ ವರ್ಷವಾಗಿದ್ದು, “ಡೇನಿಯಲ್ ಆಗ ಕೆಲಸ ಕಳೆದುಕೊಂಡಿದ್ದಲ್ಲದೇ, ನಮ್ಮ ಮನೆ ಹಾಗೂ ಒಂದಷ್ಟು ಆಸ್ತಿಯನ್ನು ಮಾರಾಟ ಮಾಡಿದ್ದೆವು. ಕೆಲಸ ಅರಸಿ ಮಿಸ್ಸೋರಿಗೆ ತೆರಳಿದರೂ ನಮಗೆ ಅಲ್ಲೂ ಸಹ ಯಾವುದೇ ಪ್ರಯೋಜನವಾಗದೇ, ಕುಟುಂಬ ಹಾಗೂ ಸ್ನೇಹಿತರಿಂದ ದೂರ ಉಳಿಯಬೇಕಾಗಿ ಬಂದಿತ್ತು” ಎಂದು ಹೇಳಿದ ರುತ್‌, 36 ವರ್ಷದ ತಮ್ಮ ಪತಿಯನ್ನು ದೈನಂದಿನ ಥೆರಪಿಗೆ ಕರೆದೊಯ್ಯುತ್ತಿದ್ದು, ಆತನ ಸ್ಮರಣಾಶಕ್ತಿ ಮರಳಿ ಪಡೆಯುವಂತೆ ಮಾಡಲು ಹರಸಾಹಸ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...