alex Certify ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌

ಜಗತ್ತಿನ ಅತ್ಯಂತ ಶೀತಮಯ ನಗರವಾದ ರಷ್ಯಾದ ಯಾಕುಟ್ಸ್ಕ್‌ಗೆ ಭೇಟಿ ಕೊಟ್ಟಿರುವ ಯೂಟ್ಯೂಬರ್‌‌ ಸೆನೆಟ್, ಅಲ್ಲೊಂದು ಡಾಕ್ಯುಮೆಂಟರಿ ಮಾಡಿಕೊಂಡು ಬಂದಿದ್ದಾರೆ.

ಈ ಜಾಗ ತಲುಪಲು ತಮಗೆ 30 ಗಂಟೆ ಹಿಡಿದವು ಎಂದಿರುವ ಸೆನೆಟ್, ಹೆಚ್ಚಿನ ಮಂದಿಗೆ ಗೊತ್ತೇ ಇರದ ವಿಶಿಷ್ಟ ಜಾಗಗಳನ್ನು ಹುಡುಕಿಕೊಂಡು ಹೋಗುತ್ತಾರೆ.

ಹೊರಜಗತ್ತಿನಿಂದ ಪ್ರತ್ಯೇಕವಾಗಿರುವ ಯಾಕುಟ್ಸ್‌ಕ್‌ನಲ್ಲಿ ಹಿಂದೊಂದು ಕಾಲದಲ್ಲಿ ಗಡೀಪಾರು ಮಾಡಲಾದ ಜನರನ್ನು ಇಡಲಾಗುತ್ತಿತ್ತು.

ತನಗೆ 37 ವರ್ಷವೆಂಬುದನ್ನೇ ಮರೆತಿದ್ದಾನೆ ಈ ಪತಿ….!

“ನಾನು ಭೂಮಿ ಮೇಲಿನ ಅತ್ಯಂತ ಶೀತಮಯ ನಗರದಲ್ಲಿದ್ದೇನೆ; ಯಾಕುಟ್ಸ್ಕ್‌, ಇದು ಯಾಕುಟಿಯಾ, ಸೈಬೀರಿಯಾ, ರಷ್ಯಾದಲ್ಲಿದೆ. ಇಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನವು -96 ಡಿಗ್ರೀ ಫ್ಯಾರ್ಹನ್‌ಹೀಟ್‌ (71 ಡಿಗ್ರೀ ಸೆಲ್ಸಿಯಸ್‌) ಇದೆ,” ಎಂದು ಸೆನೆಟ್ ತಿಳಿಸಿದ್ದಾರೆ.

“ಲಾಸ್ ಏಂಜಿಲೀಸ್‌ನಿಂದ ಯಾಕುಟ್ಸ್ಕ್‌ಗೆ ವಿಮಾನ ಪ್ರಯಾಣದ ಒನ್‌ವೇ ಟಿಕೆಟ್‌ 1000 ಅಮೆರಿಕನ್ ಡಾಲರ್‌ಗಳಷ್ಟಿದೆ. ನ್ಯೂಯಾರ್ಕ್ ನಗರದಿಂದ ಚಳಿಗಾಲದಲ್ಲಿ ಯಾವುದೇ ಫ್ಲೈಟ್‌ಗಳಿರಲಿಲ್ಲ. ಅದೃಷ್ಟವಶಾತ್‌, ಹೊಟೇಲ್ ದರಗಳು ಸೈಬೀರಿಯಾದಲ್ಲಿ ಅಗ್ಗವಾಗಿವೆ,” ಎಂದು ಸೆನೆಟ್ ವಿವರಿಸುತ್ತಾರೆ.

ತಾವು ಇಲ್ಲಿಗೆ ಭೇಟಿ ಕೊಟ್ಟ ವೇಳೆ ತಾಪಮಾನವು -50 ಡಿಗ್ರೀ ಸೆಲ್ಸಿಯಸ್ ಇತ್ತು ಎಂದು ಸೆನೆಟ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...