ಮೋಟಾರ್ ಸೈಕಲ್ ಸವಾರಿ ಮಾಡುವಾಗ ಮಳೆಯಿಂದ ತನ್ನ ಮಗುವನ್ನು ರಕ್ಷಿಸಲು ಒಬ್ಬ ವ್ಯಕ್ತಿ ತನ್ನ ಜಾಕೆಟ್ ಬಳಸಿದ್ದು, ಅದೀಗ ವೈರಲ್ ಆಗಿದೆ.
ಈ ಪೋಸ್ಟ್ ಅನ್ನು ಡಾ. ಅಜಯಿತ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ಜಾಕೆಟ್ನಿಂದ ರಕ್ಷಿಸುವುದು ದೊಡ್ಡ ವಿಷಯವಲ್ಲ. ಆದರೆ ಇಲ್ಲೇ ಇರುವುದು ಕುತೂಹಲ. ಇಲ್ಲಿ ಬಾಲಕ ಮಳೆಯಿಂದ ರಕ್ಷಿಸಿಕೊಳ್ಳಲು ತಂದೆಯ ಜಾಕೆಟ್ ಒಳಗೆ ತೂರಿಕೊಂಡಿದ್ದಾನೆ.
ಟ್ರಾಫಿಕ್ ಸಿಗ್ನಲ್ ಬಳಿ ಈ ಘಟನೆ ನಡೆದಿದ್ದು, ಬಸ್ಸಿನಿಂದ ಚಿತ್ರವನ್ನು ಕ್ಲಿಕ್ಕಿಸಲಾಗಿದೆ. ಇದು ಅಪ್ಪನ ಪ್ರೀತಿ. ಅದರೆ ಅಪ್ಪನ ಪ್ರೀತಿಯನ್ನು ಕಡಿಮೆ ಎಂದು ತೋರಿಸಲಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದ್ದು, ಇದಕ್ಕೆ ಪುರುಷರು ಅತ್ಯಧಿಕವಾಗಿ ಕಮೆಂಟ್ ಮಾಡುತ್ತಿದ್ದಾರೆ.