alex Certify ಹೆಂಡತಿ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ಪತಿರಾಯ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ಪತಿರಾಯ ಮಾಡಿದ್ದೇನು ಗೊತ್ತಾ…?

ಕ್ಲೀವ್‌ಲ್ಯಾಂಡ್, ಓಹಿಯೋ: ತನ್ನ ಮದುವೆಯಾಗುವವಳ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ನಂತರ ಮೆಟ್ಟಿಲುಗಳ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯು, ಆಕೆಯ ಮೇಲೆ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ಓಹಿಯೋ ನ್ಯಾಯಾಲಯ ತೀರ್ಪು ನೀಡಿದೆ.

ಜಾನ್ ವಾಲ್ವರ್ತ್ ಅವರು, ಫೆಬ್ರವರಿ 2018 ರಲ್ಲಿ ಅವರ ಫಿಯಾನ್ಸಿ ಆಗಿದ್ದು, ಈಗ ಪತ್ನಿಯಾಗಿರುವ ಜೂಡಿ ಖೌರಿಯ ಮನೆಯಲ್ಲಿ ನೆಲಮಾಳಿಗೆಯ ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಅವರು, $80,000 ಕ್ಕಿಂತ ಹೆಚ್ಚು ವೈದ್ಯಕೀಯ ಬಿಲ್‌ಗಳನ್ನು ಪಾವತಿಸಿದ್ದ.

ʼಕಂಕಣ ಭಾಗ್ಯʼ ಕೂಡಿ ಬರಲು ನವರಾತ್ರಿಯಲ್ಲಿ ಮಾಡಿ ಈ ಕೆಲಸ

ವಾಲ್ವರ್ತ್ ತನ್ನ ಕಾರಿನಿಂದ ಪೆಟ್ಟಿಗೆಯನ್ನು ಹಿಂಬಾಗಿಲಿನ ಮೂಲಕ ತನ್ನ ನೆಲಮಾಳಿಗೆಗೆ ಒಯ್ಯುತ್ತಿದ್ದಳು. ಆಕೆ ದಾರಿಯಲ್ಲಿ ಬಿಟ್ಟಿದ್ದ ಚಪ್ಪಲಿಗಳ ಮೇಲೆ ಜಾನ್ ಕಾಲಿಟ್ಟ. ಸಮತೋಲನ ಕಳೆದುಕೊಂಡ ಈತ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಕೈ, ಕಾಲು,ಮತ್ತು ಕೈ ಮೂಳೆ ಮುರಿದಿದೆ.

ಅಲ್ಲದೆ, ವಾಲ್ವರ್ತ್ ಹಲವಾರು ತಿಂಗಳುಗಳ ಕಾಲ ಕೆಲಸ ಮಾಡಲಾಗದ ಕಾರಣ $ 18,000 ಕ್ಕಿಂತ ಹೆಚ್ಚು ಆದಾಯವನ್ನು ಕಳೆದುಕೊಂಡಿದ್ದಾನಂತೆ.

ವಾಲ್ವರ್ತ್ ಅಕ್ಟೋಬರ್ 2019 ರಲ್ಲಿ ಖೌರಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಖೌರಿ ಅವರ ಮನೆಯಲ್ಲಿ ಅಪಾಯಕಾರಿ ಪರಿಸ್ಥಿತಿಗಳನ್ನು ಸೃಷ್ಟಿಸಿದ್ದಾರೆ. ಆ ಪರಿಸ್ಥಿತಿಗಳಿಂದ ಅತಿಥಿಯನ್ನು ರಕ್ಷಿಸಲು ಆತಿಥೇಯರಾಗಿ ತಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದು ಜಾನ್ ಪರ ವಕೀಲರು ವಾದಿಸಿದ್ದಾರೆ.

ದೆಹಲಿಗೆ ಹೋದ್ರೆ ಮರೆಯದೆ ನೋಡಬೇಕಾದ ಸ್ಥಳ ಈ ಸುಂದರ ದೇವಸ್ಥಾನ

ಇನ್ನು ಖೌರಿ ಹೆಚ್ಚಾಗಿ ತನ್ನ ಚಪ್ಪಲಿಗಳನ್ನು ಹಿಂದಿನ ಬಾಗಿಲಿನಲ್ಲೇ ಬಿಡುತ್ತಾರಂತೆ. ಆದಾಗ್ಯೂ, ಅವನು ತನ್ನ ಪಾದರಕ್ಷೆಗಳ ಮೇಲೆ ಕಾಲಿಟ್ಟು ಬಿದ್ದಿದ್ದಾನೆ ಎಂಬುವುದು ಖಚಿತವಾಗಿ ತಿಳಿದಿರಲಿಲ್ಲ. ತನ್ನ ತಪ್ಪಿನಿಂದ ಜಾನ್ ಬಿದ್ದಿರಬಹುದು ಎಂದು ಭಾವಿಸಿದ್ದಾಗಿ ಖೌರಿ ಹೇಳಿದ್ದಾಳೆ.

ಅಪಘಾತದ ಒಂದು ವರ್ಷದ ನಂತರ ಮೇ 2019 ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ: ಸೇವೆ ಮುಂದುವರೆಸಲು ಸರ್ಕಾರದ ನಿರ್ಧಾರ

ಇನ್ನು ಕೋರ್ಟ್ ನಲ್ಲಿ ವಾದ-ವಿವಾದ ಆಲಿಸಿದ ಬಳಿಕ ಮೂವರು ನ್ಯಾಯಾಧೀಶರ ಸಮಿತಿಯು, ಸಮಂಜಸವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ವ್ಯಕ್ತಿಯು ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು ಎಂದು ತೀರ್ಪು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...