alex Certify ’ಕರ್ಮ ರಿಟರ್ನ್ಸ್‌’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಕರ್ಮ ರಿಟರ್ನ್ಸ್‌’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…!

ನಾವು ಮಾಡುವ ಕರ್ಮಗಳು ನಮಗೆ ಅದೇ ರೀತಿಯ ಫಲ ನೀಡುತ್ತವೆ ಎಂಬ ಮಾತು ಬಹುತೇಕ ಸಲ ಸಾಬೀತಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ವ್ಯಕ್ತಿಯೊಬ್ಬ ಬೀದಿ ನಾಯಿಗೆ ಒದೆಯಲು ಹೋಗಿ ತಾನೇ ಜಾರಿ ಬಿದ್ದಿದ್ದು, ವಿಡಿಯೊ ಈಗ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಆಗಿದ್ದು, ಸುಮಾರು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಒಂದಷ್ಟು ಜನ ‘ಕರ್ಮ ರಿಟರ್ನ್ಸ್‌’ ಎಂಬುದಕ್ಕೆ ಇದೇ ಉತ್ತಮ ನಿದರ್ಶನವಾಗಿದೆ ಎಂದಿದ್ದಾರೆ. ಮತ್ತೆ ಕೆಲವೊಂದಿಷ್ಟು ಜನ ಇದು ಕರ್ಮದ ಪ್ರತಿಫಲ ಎಂದಿದ್ದಾರೆ. ’ಪರ್ಫೆಕ್ಟ್ ಕರ್ಮ’ ಎಂದು ಮತ್ತೊಂದಿಷ್ಟು ಜನ ರಿಪ್ಲೈ ಮಾಡಿದ್ದಾರೆ.

ವ್ಯಕ್ತಿಯು ತನ್ನ ಬೈಕ್‌ ಅನ್ನು ರಸ್ತೆ ಬದಿ ನಿಲ್ಲಿಸಿ, ಬೇರೆಡೆ ತೆರಳಿದ್ದು, ವಾಪಸ್‌ ಬರುವಷ್ಟರಲ್ಲಿ ಬೀದಿ ನಾಯಿಯೊಂದು ಬೈಕ್‌ ಬಳಿ ಬಂದು ನಿಂತಿತ್ತು. ಇದನ್ನು ಕಂಡು ಕುಪಿತಗೊಂಡ ವ್ಯಕ್ತಿಯು ನಾಯಿಗೆ ಜೋರಾಗಿ ಒದೆಯಲು ಹೋಗಿದ್ದಾನೆ. ಆದರೆ ಆಗ ಆತನ ಕಾಲು ಜಾರಿದ್ದು, ರಸ್ತೆ ಮೇಲೆಯೇ ಬಿದ್ದಿದ್ದಾನೆ. ವ್ಯಕ್ತಿ ಜಾರಿ ಬಿದ್ದಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಟ್ವಿಟರ್‌ನ ಹಲವು ಖಾತೆಗಳಿಂದ ಟ್ವೀಟ್‌ ಆಗಿದೆ.

ತಾಜ್‌ ಮಹಲ್‌ ಗೆ ರಕುಲ್‌ ಪ್ರೀತ್‌ ಸಿಂಗ್‌ – ಜಾಕಿ ಭಗ್ನಾನಿ ಭೇಟಿ

ಭಾರತದ ಪುರಾಣ-ವೇದೋಪನಿಷತ್ತುಗಳಲ್ಲಿ ಸಹ ಕರ್ಮಫಲಗಳ ಬಗ್ಗೆ ಉಲ್ಲೇಖವಿದೆ. ನಾವು ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದಾಗುತ್ತಿದೆ, ನಾವು ಬೇರೆಯವರಿಗೆ ಕೇಡು ಬಯಸಿದರೆ ನಮಗೂ ಸಹ ಕೆಟ್ಟದ್ದೇ ಆಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದು ಕಲಿಯುಗದಲ್ಲೂ ಸಾಬೀತಾಗುತ್ತದೆ ಎಂಬುದಕ್ಕೆ ವ್ಯಕ್ತಿ ಶ್ವಾನಕ್ಕೆ ಒದೆಯಲು ಹೋಗಿ ಜಾರಿ ಬಿದ್ದಿದ್ದೇ ಸಾಕ್ಷಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...