alex Certify ʼಲ್ಯಾಂಬರ್ಗಿನಿʼಯಲ್ಲಿ ಮಾಂಸ ಬೇಯಿಸಲು ಹೋಗಿ ಪೇಚಿಗೆ ಸಿಲುಕಿದ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲ್ಯಾಂಬರ್ಗಿನಿʼಯಲ್ಲಿ ಮಾಂಸ ಬೇಯಿಸಲು ಹೋಗಿ ಪೇಚಿಗೆ ಸಿಲುಕಿದ ಯುವಕ..!

ಕಾರಿನಿಂದ ಬರುತ್ತಿದ್ದ ಬೆಂಕಿಯಲ್ಲಿ ಮಾಂಸವನ್ನ ಬೇಯಿಸಲು ಹೋಗಿ ಯುವಕರು ಪೇಚಿಗೆ ಸಿಕ್ಕ ದೃಶ್ಯವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚೀನಾದ ಯುವಕರ ಗುಂಪು ಲ್ಯಾಂಬೊರ್ಗಿನಿ ಕಾರಿನಲ್ಲಿ ಮಾಂಸ ಬೇಯಿಸಲು ಮುಂದಾಗಿತ್ತು.

ವಿಡಿಯೋದಲ್ಲಿ ಯುವಕನೊಬ್ಬ ನೆಲದ ಮೇಲೆ ಕೂತು ಕಾರಿನಿಂದ ಬರ್ತಿರೋ ಬೆಂಕಿನಲ್ಲಿ ಮಾಂಸ ಬೇಯಿಸುತ್ತಿರೋದನ್ನ ನೀವು ಕಾಣಬಹುದಾಗಿದೆ. ಆದರೆ ಇದಕ್ಕಿದ್ದಂತೆ ಕಾರಿನ ತುಂಬೆಲ್ಲಾ ಹೊಗೆ ವ್ಯಾಪಿಸಿದ್ದು ಯುವಕರು ಕಂಗಾಲಾಗಿದ್ದಾರೆ. ಅಲ್ಲದೇ ಕಾರಿನಲ್ಲಿದ್ದ ಕೆಂಪು ಬಣ್ಣದ ದ್ರವ ಕೂಡ ರಸ್ತೆ ತುಂಬೆಲ್ಲಾ ಸುರಿಯಲು ಆರಂಭಿಸಿದೆ.

ಅಲ್ಲಿದ್ದ ಯಾರಿಗೂ ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬೇಕು ಎಂದು ತೋಚಲಿಲ್ಲ. ತಮಾಷೆ ಮಾಡಲು ಹೋಗಿ ಈ ರೀತಿ ಪೇಚಿಗೆ ಸಿಲುಕಿದ್ದಾರೆ.

ತಂಪಾದ ವಾತಾವರಣದಲ್ಲಿ ಲ್ಯಾಂಬರ್ಗಿನಿ ಹೆಚ್ಚು ಬಿಸಿಯಾಗಿದ್ದೇ ಈ ಅವಘಡಕ್ಕೆ ಕಾರಣ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಇದೇ ಕಾರಣಕ್ಕೆ ಕೂಲಂಟ್​ ಟ್ಯಾಂಕ್​​ನಿಂದ ಕೆಂಪು ಬಣ್ಣದ ದ್ರವ ಸುರಿದಿದೆ ಎನ್ನಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಶಾಕ್​ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...