alex Certify ಚಲಿಸುತ್ತಿರುವ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಆರ್‌ಪಿಎಫ್‌ ಪೇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿರುವ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಆರ್‌ಪಿಎಫ್‌ ಪೇದೆ

ಚಲಿಸುತ್ತಿರುವ ರೈಲನ್ನು ಏರಲು ಲಗೇಜ್ ಸಮೇತ ಹೊರಟ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದು, ಪ್ಲಾಟ್‌ಫಾರಂ ಹಾಗೂ ಹಳಿಯ ನಡುವಿನ ಸಂದಿಯಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆಯೊಂದು ದೆಹಲಿಯ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಜರುಗಿದೆ.

ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ: ತಜ್ಞ ವೈದ್ಯರ ವಾರ್ನಿಂಗ್

ಚಲಿಸುತ್ತಿರುವ ರೈಲಿಗೆ ಮೊದಲು ತನ್ನ ಬ್ಯಾಗನ್ನು ಇಟ್ಟ ಈ ವ್ಯಕ್ತಿ ನಂತರ ರೈಲನ್ನೇರಲು ನೋಡಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದಾರೆ. ಆ ವೇಳೆ ಅಲ್ಲೇ ಇದ್ದ ಮತ್ತೊಬ್ಬ ಪ್ರಯಾಣಿಕರು ತಮ್ಮ ಕೈಬ್ಯಾಗ್‌ ಅನ್ನು ಚೆಲ್ಲಿ ಕೂಡಲೇ ಆತನ ನೆರವಿಗೆ ಧಾವಿಸಿದ್ದಾರೆ.

ಕೂಡಲೇ ಅಲ್ಲೇ ಹತ್ತಿರದಲ್ಲಿದ್ದ ರೈಲ್ವೇ ಪೊಲೀಸ್ ಪೇದೆ ರಾಜ್‌ವೀರ್‌ ಸಿಂಗ್‌ ಈ ಅನಾಮಿಕ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದಾರೆ.

ಘಟನೆಯ ವಿಡಿಯೋ ಶೇರ್‌ ಮಾಡಿದ ಆರ್‌ಪಿಎಫ್‌, ರಾಜ್‌ವೀರ್‌ ಸಿಂಗ್‌ರನ್ನು ಶ್ಲಾಘಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...