ಚಲಿಸುತ್ತಿರುವ ರೈಲನ್ನು ಏರಲು ಲಗೇಜ್ ಸಮೇತ ಹೊರಟ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದು, ಪ್ಲಾಟ್‌ಫಾರಂ ಹಾಗೂ ಹಳಿಯ ನಡುವಿನ ಸಂದಿಯಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆಯೊಂದು ದೆಹಲಿಯ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಜರುಗಿದೆ.
ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ: ತಜ್ಞ ವೈದ್ಯರ ವಾರ್ನಿಂಗ್
ಚಲಿಸುತ್ತಿರುವ ರೈಲಿಗೆ ಮೊದಲು ತನ್ನ ಬ್ಯಾಗನ್ನು ಇಟ್ಟ ಈ ವ್ಯಕ್ತಿ ನಂತರ ರೈಲನ್ನೇರಲು ನೋಡಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದಾರೆ. ಆ ವೇಳೆ ಅಲ್ಲೇ ಇದ್ದ ಮತ್ತೊಬ್ಬ ಪ್ರಯಾಣಿಕರು ತಮ್ಮ ಕೈಬ್ಯಾಗ್ ಅನ್ನು ಚೆಲ್ಲಿ ಕೂಡಲೇ ಆತನ ನೆರವಿಗೆ ಧಾವಿಸಿದ್ದಾರೆ.
ಕೂಡಲೇ ಅಲ್ಲೇ ಹತ್ತಿರದಲ್ಲಿದ್ದ ರೈಲ್ವೇ ಪೊಲೀಸ್ ಪೇದೆ ರಾಜ್‌ವೀರ್ ಸಿಂಗ್ ಈ ಅನಾಮಿಕ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದಾರೆ.
ಘಟನೆಯ ವಿಡಿಯೋ ಶೇರ್ ಮಾಡಿದ ಆರ್‌ಪಿಎಫ್, ರಾಜ್‌ವೀರ್ ಸಿಂಗ್‌ರನ್ನು ಶ್ಲಾಘಿಸಿದೆ.